More

    ಇಂಟರ್​ವಲ್ ಇಲ್ಲದ ಚಿತ್ರದಲ್ಲಿ ಕತ್ರಿನಾ ಕೈಫ್​

    ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ತಮಿಳು ನಟ ವಿಜಯ್ ಸೇತುಪತಿ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೇವಲ 90 ನಿಮಿಷ ಅವಧಿಯ ಈ ಸಿನಿಮಾದಲ್ಲಿ ಇಂಟರ್​ವಲ್ ಇರುವುದಿಲ್ಲ ಎಂಬುದೇ ವಿಶೇಷ. ಈಗಾಗಲೇ ಬಾಲಿವುಡ್​ನಲ್ಲಿ ‘ಅಂಧಾಧುನ್’, ‘ಜಾನಿ ಗದ್ದಾರ್’, ‘ಬದ್ಲಾಪುರ್’ ಸೇರಿ ಹಲವು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿರುವ ಶ್ರೀರಾಮ್ ರಾಘವನ್, ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಅಂತಾರಾಷ್ಟ್ರೀಯ ಕಿರುಚಿತ್ರವೊಂದರಿಂದ ಸ್ಪೂರ್ತಿ ಪಡೆದು, ಈ ಚಿತ್ರಕ್ಕೆ ಅವರು ಕೈಹಾಕಿದ್ದಾರೆ.

    ಏಪ್ರಿಲ್ ವೇಳೆಗೆ ಪುಣೆ ಮತ್ತು ಮುಂಬೈನಲ್ಲಿ ಸತತ 30 ದಿನಗಳಲ್ಲಿ ಚಿತ್ರೀಕರಣ ಮಾಡುವುದು ನಿರ್ದೇಶಕರ ಪ್ಲಾನ್. ನಿರ್ದೇಶನದ ಜತೆಗೆ ನಿರ್ವಣದ ಜವಾಬ್ದಾರಿಯನ್ನೂ ಶ್ರೀರಾಮ್ ವಹಿಸಿಕೊಂಡಿದ್ದಾರೆ. ಸದ್ಯ ಕತ್ರಿನಾ ಹಲವು ಹಿಂದಿ ಪ್ರಾಜೆಕ್ಟ್​ಗಳಲ್ಲಿ ಬಿಜಿಯಾಗಿದ್ದಾರೆ. ಇತ್ತ ತಮಿಳಿನ ಕೆಲ ಸಿನಿಮಾಗಳಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಈಗ ಒಪ್ಪಿರುವ ಚಿತ್ರಗಳನ್ನೆಲ್ಲ ಮುಗಿಸಿ ವಿಜಯ್ ಸೇತುಪತಿ ಮತ್ತು ಕತ್ರಿನಾ ಈ ಚಿತ್ರಕ್ಕೆ ಜತೆಯಾಗಲಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts