More

    ಸಿಕ್ಸ್​ಪ್ಯಾಕ್​ಗೆ ನೋ ಎಂದ ವಿನೋದ್; ಇನ್ನು ಮುಂದೆ ದೇಹ ದಂಡಿಸದಿರಲು ನಿರ್ಧಾರ

    ಬೆಂಗಳೂರು: ವಿನೋದ್ ಪ್ರಭಾಕರ್ ಒಂದು ತೀರ್ವನಕ್ಕೆ ಬಂದಿದ್ದಾರೆ. ದೇಹ ದಂಡಿಸುವುದು, ಸಿಕ್ಸ್ ಅಥವಾ ಏಯ್್ಟ ಪ್ಯಾಕ್ ಮಾಡಿಕೊಳ್ಳುವುದು, ಕೊನೆಗೆ ತೆರೆಯ ಮೇಲೆ ದೇಹ ಪ್ರದರ್ಶಿಸುವುದು … ಇವೆಲ್ಲಕ್ಕೂ ಅವರು ಫುಲ್​ಸ್ಟಾಪ್ ಹಾಕಿದ್ದಾರೆ. ಇನ್ನು ಮುಂದೆ ತಮ್ಮ ಬೇರ್​ಬಾಡಿ ಪ್ರದರ್ಶಿಸದಿರುವುದಕ್ಕೆ ತೀರ್ವನಿಸಿದ್ದಾರೆ.

    ವಿನೋದ್ ಇಂಥದ್ದೊಂದು ತೀರ್ವನಕ್ಕೆ ಬಂದಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ದೇಹ ದಂಡಿಸುವುದಕ್ಕೆ ಹೋಗಿ ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರಂತೆ. ‘ವರ್ಷಗಟ್ಟಲೆ ಅನ್ನ, ನೀರು ಬಿಟ್ಟು ದೇಹ ರೂಪಿಸಿಕೊಂಡಿದ್ದೇನೆ. ಉಪ್ಪು-ಖಾರ ತಿನ್ನದೆಯೇ ಜೀವಿಸಿದ್ದೇನೆ. ಅದಕ್ಕೆ ಕಾರಣ, ತೆರೆಯ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ. ಆದರೆ, ಅದರಿಂದಲೇ ಸಮಸ್ಯೆಗಳಾಗಿದ್ದೂ ಉಂಟು. ಇದರಿಂದ ಮೂಳೆಗಳಿಗೆ ಸಾಕಷ್ಟು ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಉಪು್ಪ-ಖಾರ ದೇಹಕ್ಕೆ ಆವಶ್ಯಕವಾಗಿದ್ದು, ಹಾಗೆಲ್ಲ ಅದನ್ನು ಸಂಪೂರ್ಣವಾಗಿ ಬಿಡಬಾರದು ಎಂದು ಹೇಳಿದ್ದಾರೆ. ಹಾಗಾಗಿ, ದೇಹವನ್ನು ತುಂಬ ದಂಡಿಸದೆಯೇ, ಚೆನ್ನಾಗಿ ಇಟ್ಟುಕೊಳ್ಳುವ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ. ಸಿಕ್ಸ್​ಪ್ಯಾಕ್ ಮಾಡಿ ಪ್ರದರ್ಶಿಸುವುದಿಲ್ಲ’ ಎನ್ನುತ್ತಾರೆ ವಿನೋದ್.

    ಅಂದಹಾಗೆ, ಅವರು ಮಾತನಾಡಿದ್ದು ‘ಶ್ಯಾಡೋ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ. ಈ ಚಿತ್ರ ಫೆಬ್ರವರಿ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೆ ಇನ್ನು 15 ದಿನಗಳಷ್ಟೇ ಉಳಿದಿದ್ದು, ಚಿತ್ರ ಆತುರಾತುರವಾಗಿ ಬಿಡುಗಡೆಯಾಗುತ್ತಿರುವ ಬಗ್ಗೆ ಅವರಿಗೆ ಬೇಸರವಿದೆ. ಈ ಕುರಿತು ಮಾತನಾಡುವ ಅವರು, ‘ಈ ಚಿತ್ರ 2018ರಲ್ಲೇ ಶುರುವಾಗಿದ್ದು, ಈಗ ಬಿಡುಗಡೆಯಾಗುತ್ತಿದೆ. ಇಷ್ಟು ದಿನ ಕಾದು, ಈಗ ಅವಸರವಸರವಾಗಿ ಯಾವುದೇ ಪ್ರಚಾರವಿಲ್ಲದೆ ಬಿಡುಗಡೆ ಮಾಡಿದರೆ ಹೇಗೆ?’ ಎಂದು ಪ್ರಶ್ನಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts