ಮಗಳನ್ನು ತಬ್ಬಿಕೊಳ್ಳಲು ಸಾಧ್ಯವಾಗುತ್ತಿಲ್ಲ: ಹಾಳಾದ ಕರೊನಾ ಎಂದ ಮಂಚು ಲಕ್ಷ್ಮಿ!

Published on
ಜನಪ್ರಿಯ ತೆಲುಗು ನಟಿ ಮಂಚು ಲಕ್ಷ್ಮಿ ಪ್ರಸನ್ನ ಅವರು ಕರೊನಾಗೆ ಪಾಸಿಟಿವ್ ಎಂದು ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಬಹಿರಂಗಪಡಿಸಿದರು. ಜತೆಗೆ, ತಮ್ಮ ಅಭಿಮಾನಿಗಳು ಮತ್ತು ಎಲ್ಲರೂ ಕರೊನಾ ಪರೀಕ್ಷೆ ಮಾಡಿಸಿಕೊಂಡು ಹುಷಾರಾಗಿರಬೇಕು ಎಂದು ವಿನಂತಿಸಿದರು. ಇದೀಗ, ಪಾಸಿಟಿವ್ ಆಗಿರುವ ಕಾರಣ ನಟಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ. ಹಾಗಾಗಿ, ಸಮಯ ಕಳೆಯಲು ಒಂದಿಷ್ಟು ಸಿನಿಮಾಗಳನ್ನು ನೋಡುತ್ತಾ ಕಾಲ ಕಳೆಯುತ್ತಿರುವುದರ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಈ ನಡುವೆ ಕರೊನಾದ ಸೌಮ್ಯ ಲಕ್ಷಣಗಳಿಂದ ಚುರು ಸುಸ್ತಾಗಿರುವುದರ ಬಗ್ಗೆಯೂ ನಟಿ ಮಾತಾಡಿದ್ದಾರೆ.
ಇದೆಲ್ಲದರ ನಡುವೆ ಎಷ್ಟು ಹುಷಾರಿಲ್ಲದಿದ್ದರೂ ನಾನು ತಡೆದುಕೊಳ್ಳಬಲ್ಲೆ, ಆದರೆ ತಾವು ತಮ್ಮ ಮಗಳು ಮಂಚು ವಿದ್ಯಾ ನಿರ್ವಾಣ ಆನಂದ್​ನಿಂದ ದೂರ ಇರುವುದು, ತಬ್ಬಿಕೊಳ್ಳಲಾಗದೆ ಇರುವುದು ತುಂಬಾ ಕಷ್ಟ ಎಂದು ತಿಳಿಸುತ್ತಾ ಬೇಸರ ಮಾಡಿಕೊಂಡಿದ್ದಾರೆ. ಅಂದಹಾಗೆ, ಮುಂಬರುವ ಮಲಯಾಳಂ ಚಿತ್ರ 'ಮಾನ್‌ಸ್ಟರ್‌' ಚಿತ್ರೀಕರಣವನ್ನು ಮುಗಿಸಲು ಮಂಚು ಹೆಚ್ಚು ಕಡೆ ಪ್ರಯಾಣಿಸಿದ್ದಾರೆ. ತನ್ನ ಮೊದಲ ಪೋಸ್ಟ್‌ನಲ್ಲಿ, 'ವೈರಸ್ ತನ್ನನ್ನು ಹಿಡಿಯುವ ಮೊದಲು ಅದರೊಂದಿಗೆ ಕಣ್ಣಾಮುಚ್ಚಾಲೆ ಆಡಿದ್ದೇನೆ', ಎಂದು ನಟಿ ಉಲ್ಲೇಖಿಸಿದ್ದಾರೆ. ನಟಿಯ ಕಿರಿಯ ಸಹೋದರ ಮತ್ತು ತೆಲುಗು ನಟ ಮಂಚು ಮನೋಜ್ ಕೂಡ ಕರೊನಾ ಪಾಸಿಟಿವ್ ಆಗಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net