ಲಹರಿ ಮ್ಯೂಸಿಕ್‌ಗೆ ಡೈಮಂಡ್​ ಅವಾರ್ಡ್​ ... ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ

Lahari Music - Final
Published on

ಬೆಂಗಳೂರು: ಲಹರಿ ಮ್ಯೂಸಿಕ್​ ಚಾನಲ್​, ಸದ್ದಿಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಯಾರೂ ಮಾಡದ ಹೊಸ ದಾಖಲೆಯೊಂದನ್ನು ಮಾಡಿದೆ. ಲಹರಿ ಯುಟ್ಯೂಬ್‌ ಚಾನೆಲ್‌ ಶುರುವಾಗಿ ೧೦ ವರ್ಷಗಳಾಗಿದ್ದು, ಈ ಅವಧಿಯಲ್ಲಿ ೧.೧೮ ಕೋಟಿ ಚಂದದಾರರ ಬಳಗ ಹೊಂದಿದೆ. ಈ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಿದೆ.

ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನಲ್ಲಿರುವ ಯುಟ್ಯೂಬ್‌ ಸಂಸ್ಥೆಯಿಂದ ಲಹರಿ ಮ್ಯೂಸಿಕ್‌ಗೆ ಪ್ರತಿಷ್ಟಿತ 'ಡೈಮಂಡ್‌ ಅವಾರ್ಡ್‌' ಪ್ರಶಸ್ತಿ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.

ಲಹರಿ ಮ್ಯೂಸಿಕ್​ಗೆ ಯೂಟ್ಯೂಬ್​ ಸಂಸ್ಥೆಯಿಂದ ಪ್ರಶಸ್ತಿ ಸಿಗುತ್ತಿರುವುದು ಮೊದಲೇನಲ್ಲ. ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಸಿಲ್ವರ್‌ ಹಾಗೂ ಗೋಲ್ಡನ್‌ ಪ್ರಶಸ್ತಿ ಸಿಕ್ಕಿದ್ದವು. ಈಗ 'ಡೈಮಂಡ್‌ ಅವಾರ್ಡ್‌' ಸಿಕ್ಕಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್‌ ಅಗ್ರಗಣ್ಯ ಸ್ಥಾನಕ್ಕೇರಿದೆ.

ಈ ಕುರಿತು ಮಾತನಾಡುವ ಲಹರಿ ಸಂಸ್ಥೆಯ ವೇಲು, 'ನನಗೆ ಗೊತ್ತಿರುವ ಹಾಗೆ ಇದು ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೇ ಮೊದಲು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಯಾವುದೇ ಭಾಷೆಯಲ್ಲೂ ಇಷ್ಟು ಚಂದದಾರರ ಬಳಗವನ್ನು ಸಂಪಾದಿಸಿಕೊಂಡ ಮ್ಯೂಜಿಕ್‌ ಚಾನಲ್​ ಯೂಟ್ಯೂಬ್​ನಲ್ಲಿ ಇಲ್ಲ. ಅಂತಹ ಹೊಸ ದಾಖಲೆ ಲಹರಿಗೆ ಸಿಕ್ಕಿದೆ ಎನ್ನುವುದೇ ನಮ್ಮ ಸಂಸ್ಥೆಯ ಹೆಮ್ಮೆ. ಎಲ್ಲರ ಬೆಂಬಲದಿಂದ ಇದೆಲ್ಲ ಸಾಧ್ಯವಾಗಿದೆʼ ಎನ್ನುತ್ತಾರೆ ಲಹರಿ ವೇಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net