

ಮುಂಬೈ: ಕಳೆದ ವಾರವಷ್ಟೇ ಕಂಗನಾ ರಣಾವತ್ 1975ರ ಎಮರ್ಜೆನ್ಸಿ ಕುರಿತಾಗಿ 'ಎಮರ್ಜೆನ್ಸಿ' ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು. ಬರೀ ನಿರ್ದೇಶನವಷ್ಟೇ ಅಲ್ಲ, ಆ ಚಿತ್ರದಲ್ಲಿ ಇಂದಿರಾ ಗಾಂಧಿ ಅವರ ಪಾತ್ರವನ್ನೂ ಕಂಗನಾ ಮಾಡುತ್ತಿದ್ದು, ಪಾತ್ರಕ್ಕಾಗಿ ಅವರು ಮೇಕಪ್ ಟೆಸ್ಟ್ ಮಾಡಿಸಿಕೊಳ್ಳುತ್ತಿರುವುದು ಸಹ ಸುದ್ದಿಯಾಗಿತ್ತು.
ಇದನ್ನೂ ಓದಿ: ವರ್ಷಾಂತ್ಯಕ್ಕೆ ವಿಘ್ನೇಶ್ ಶಿವನ್, ನಯನತಾರಾ ಮದುವೆ?
ಈಗ್ಯಾಕೆ ಈ ವಿಷಯವೆಂದರೆ, 'ಎಮರ್ಜೆನ್ಸಿ' ಫ್ಲಾಪ್ ಆಗಲಿದೆ ಎಂದು ಬಾಲಿವುಡ್ನ ಸ್ವಯಂಘೋಷಿತ ನಂಬರ್ ಒನ್ ವಿಮರ್ಶಕ ಕೆಆರ್ಕೆ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಈ ಹಿಂದೆ ನಿರ್ದೇಶಕ ಮಧುರ್ ಭಂಡಾರ್ಕರ್, ಇಂದಿರಾ ಗಾಂಧಿ ಮತ್ತು ಎಮರ್ಜೆನ್ಸಿಯ ಕುರಿತು 'ಇಂದು ಸರ್ಕಾರ್' ಎಂಬ ಚಿತ್ರ ನಿರ್ದೇಶಿಸಿದ್ದರು. ಆ ಚಿತ್ರವನ್ನು ಯಾರೂ ನೋಡಲಿಲ್ಲ. ಈಗ ಅಕ್ಕ, ಅದೇ ಕಥೆ ಇಟ್ಟುಕೊಂಡು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಇದರ ಅರ್ಥ ಸ್ಪಷ್ಟ. ಇದುವರೆಗೂ 11 ಫ್ಲಾಪ್ ಚಿತ್ರಗಳನ್ನು ಕೊಟ್ಟಿರುವ ಕಂಗನಾ, 'ಎಮರ್ಜೆನ್ಸಿ' ಮೂಲಕ 12ನೇ ಫ್ಲಾಪ್ ಚಿತ್ರ ನೀಡಲಿದ್ದಾರೆ' ಎಂದು ಕೆಆರ್ಕೆ ಹೇಳಿದ್ದಾರೆ. ಈ ವಿಷಯವಾಗಿ ಕಂಗನಾ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿದೆ ಸುಮ್ಮನಿದ್ದು, ಕಂಗನಾ ಏನು ಹೇಳಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.
ಕೆಆರ್ಕೆ ಮಾತಿಗೆ ಕಂಗನಾ ಹೇಗೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಆದರೆ, ಚಿತ್ರವನ್ನು ನಿರ್ದೇಶಿಸುವುದಕ್ಕೆ ಥ್ರಿಲ್ ಆಗಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಇನ್ನೊಂದು ಲೆವೆಲ್ಗೆ ತೆಗೆದುಕೊಂಡು ಹೋಗುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಸಹ ಹಾಕಿದ್ದರು. 'ನಿರ್ದೇಶನ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಕಳೆದ ಒಂದು ವರ್ಷದಿಂದ ಈ ಸ್ಕ್ರಿಪ್ಟ್ನಲ್ಲಿ ತೊಡಗಿಸಿಕೊಂಡಿದ್ದು, ನನಗಿಂತ ಈ ಚಿತ್ರವನ್ನು ಚೆನ್ನಾಗಿ ಮಾಡುವುದಕ್ಕೆ ಯಾರಿಂದ ಸಾಧ್ಯ? ಇದರಿಂದ ಬೇರೆ ಚಿತ್ರಗಳನ್ನು ಕೈಬಿಡಬೇಕಾದರೂ, ಆ ತ್ಯಾಗ ಮಾಡುವುದಕ್ಕೆ ನಾನು ಸಿದ್ಧ. ಈ ಚಿತ್ರದಿಂದ ಇನ್ನೊಂದು ಲೆವೆಲ್ಗೆ ಹೋಗುತ್ತೇನೆ ಎಂಬ ನಂಬಿಕೆ ಖಂಡಿತಾ ಇದೆ' ಎಂದು ಕಂಗನಾ ಹೇಳಿಕೊಂಡಿದ್ದಾರೆ.