ನಿರ್ಮಾಪಕಿಯಾದ ಬಾಲಿವುಡ್ ಚೆಲುವೆ ; ಇದೇ ನೋಡಿ ಕೃತಿ, ಕಾಜೊಲ್​ ನಟಿಸುತ್ತಿರುವ ಚಿತ್ರ

Do_Patti_Kajol_Kriti_Sanon
Published on

ಬಾಲಿವುಡ್ ನಟಿಯರಾದ ಕಾಜೊಲ್ ಮತ್ತು ಕೃತಿ ಸನನ್ 2015ರಲ್ಲಿ ರಿಲೀಸ್ ಆದ ‘ದಿಲ್ವಾಲೆ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಎಂಟು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಶಶಾಂಕ ಚತುರ್ವೇದಿ ಆ್ಯಕ್ಷನ್-ಕಟ್ ಹೇಳುತ್ತಿರುವ ‘ದೋ ಪತ್ತಿ’ ಎಂಬ ಮಿಸ್ಟರಿ ಥ್ರಿಲ್ಲರ್ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರದ ಮೂಲಕ ಕೃತಿ ಸನನ್ ನಿರ್ಮಾಪಕಿಯಾಗಿ ಭಡ್ತಿ ಪಡೆದಿದ್ದಾರೆ.

ಇತ್ತೀಚೆಗಷ್ಟೆ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ಚಿತ್ರದ ಬಗ್ಗೆ ಕಾಜೊಲ್, ‘ಇದೊಂದು ಸಾಹಸಮಯ ಹಾಗೂ ನಿಗೂಢತೆಗಳಿಂದ ಕೂಡಿರುವ ಕಥೆ. ಭಾರತದ ನೆಲದ ಕಥೆಯಾದರೂ ಗಡಿದಾಟಿ ವಿಶ್ವಾದ್ಯಂತ ಎಲ್ಲ ಸಿನಿಮಾಪ್ರಿಯರನ್ನು ರಂಜಿಸುವ, ಕನೆಕ್ಟ್ ಆಗುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಜತೆಗೆ ಕೃತಿ ಸಹ, ‘‘ದೋ ಪತ್ತಿ’ ಮೂಲಕ ನಾನು ನಿರ್ಮಾಣದಲ್ಲಿ ತೊಡಗುತ್ತಿರುವ ಕಾರಣ ಈ ಸಿನಿಮಾ ನನಗೆ ತುಂಬ ವಿಶೇಷ. ನಟಿ, ನಿರ್ಮಾಪಕಿಯಾಗಿ ಈ ಸಿನಿಮಾದ ಪ್ರತಿಯೊಂದು ಹಂತವನ್ನೂ ನಾನು ಎಂಜಾಯ್ ಮಾಡಿದ್ದೇನೆ’ ಎಂದಿದ್ದಾರೆ. 2024ಕ್ಕೆ ‘ದೋ ಪತ್ತಿ’ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net