More

    ನಡುರಸ್ತೆಯಲ್ಲಿ ಅರೆಸ್ಟ್​ ಆದ ರಕ್ತಸಿಕ್ತ ಭೀಮ ; ದುನಿಯಾ ವಿಜಯ್​ ಚಿತ್ರದ ಶೂಟಿಂಗ್​ ಕಂಪ್ಲೀಟ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ಸಲಗ’ ಸಕ್ಸಸ್ ಬಳಿಕ ನಟ, ನಿರ್ದೇಶಕ ದುನಿಯಾ ವಿಜಯ್ ಆ್ಯಕ್ಷನ್-ಕಟ್ ಹೇಳುತ್ತಿರುವ ಮತ್ತೊಂದು ಕಲ್ಟ್ ಸಿನಿಮಾ ‘ಭೀಮ’. ನಿರ್ದೇಶನದ ಜತೆಗೆ ವಿಜಯ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ರಂಗಭೂಮಿ ಪ್ರತಿಭೆ ಅಶ್ವಿನಿ ಅಂಬರೀಷ್ ನಾಯಕಿಯಾಗಿದ್ದಾರೆ. ಮಂಗಳವಾರ (ಡಿ. 19) ಮಧ್ಯರಾತ್ರಿ ‘ಭೀಮ’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಬೆಂಗಳೂರಿನ ವಿನೋಬನಗರದ ಗಲ್ಲಿಗಳಲ್ಲಿ ಇಡೀ ತಾರಾಗಣದ ಜತೆ ಕೊನೆಯ ಸನ್ನಿವೇಶದ ಚಿತ್ರೀಕರಣ ಮಾಡುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆದಿದೆ.

    ಇದನ್ನೂ ಓದಿ : ಟಿಕೆಟ್ ಮಾರಾಟದಲ್ಲಿ ‘ಸಲಾರ್’ ಅಬ್ಬರ! ಯಾವ ರಾಜ್ಯದಲ್ಲಿ ಎಷ್ಟೆಷ್ಟು? ಇಲ್ಲಿದೆ ವಿವರ

    ನಡುರಸ್ತೆಯಲ್ಲಿ ಅರೆಸ್ಟ್​ ಆದ ರಕ್ತಸಿಕ್ತ ಭೀಮ ; ದುನಿಯಾ ವಿಜಯ್​ ಚಿತ್ರದ ಶೂಟಿಂಗ್​ ಕಂಪ್ಲೀಟ್​

    ಈಗಾಗಲೇ ಚರಣ್ ರಾಜ್ ಸಂಗೀತದಲ್ಲಿ ವಿಭಿನ್ನ ಶೈಲಿಯಲ್ಲಿರುವ ‘ಬ್ಯಾಡ್ ಬಾಯ್ಸ’ ಮತ್ತು ‘ಐ ಲವ್ ಯೂ ಕಣೇ’ ಎಂಬ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿವೆ. ಚಿತ್ರಕ್ಕೆ ಶಿವಸೇನ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ದೀಪು ಎಸ್. ಕುಮಾರ್ ಸಂಕಲನವಿರಲಿದೆ.

    ಇದನ್ನೂ ಓದಿ : ಐಶ್ವರ್ಯಾ ರೈಗೂ ನನ್ನ ಮಗನಿಗೂ ಅಫೇರ್! ಸುರೇಶ್​ ಒಬೆರಾಯ್ ಬಿಚ್ಚಿಟ್ಟ ರಹಸ್ಯವಿದು…

    ನಡುರಸ್ತೆಯಲ್ಲಿ ಅರೆಸ್ಟ್​ ಆದ ರಕ್ತಸಿಕ್ತ ಭೀಮ ; ದುನಿಯಾ ವಿಜಯ್​ ಚಿತ್ರದ ಶೂಟಿಂಗ್​ ಕಂಪ್ಲೀಟ್​

    ದುನಿಯಾ ವಿಜಯ್, ಅಶ್ವಿನಿ ಜತೆ ಪ್ರಿಯಾ ಶಠಮರ್ಷಣ, ಬ್ಲ್ಯಾಕ್ ಡ್ರಾೃಗನ್ ಮಂಜು, ಗಿಲಿಗಿಲಿ ಚಂದ್ರು, ಕಲ್ಯಾಣಿ ರಾಜು, ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರೀಕರಣದ ಜತೆ ಜತೆಗೆ ಡಬ್ಬಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಸಾಗಿದ್ದು, ಎಲ್ಲವೂ ಅಂದುಕೊಂಡಂತಾದರೆ ಇನ್ನು ಕೆಲವೇ ದಿನಗಳಲ್ಲಿ ‘ಭೀಮ’ ತೆರೆಗೆ ಬರಲು ರೆಡಿಯಾಗಲಿದ್ದಾನೆ.

    ನಡುರಸ್ತೆಯಲ್ಲಿ ಅರೆಸ್ಟ್​ ಆದ ರಕ್ತಸಿಕ್ತ ಭೀಮ ; ದುನಿಯಾ ವಿಜಯ್​ ಚಿತ್ರದ ಶೂಟಿಂಗ್​ ಕಂಪ್ಲೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts