More

    ಬಿಗ್​ಬಾಸ್​ ವಿನಯ್​ ಪರ ಬ್ಯಾಟ್​ ಬೀಸಿದ ಕಿರುತೆರೆ ನಟಿ; ಫುಲ್​ ಟ್ರೋಲ್

    ಬೆಂಗಳೂರು:  ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಟಾಸ್ಕ್​ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ಬಿಗ್​ಬಾಸ್​ನಲ್ಲಿ ಹಲವು ಸ್ಪರ್ಧಿಗಳು ನಾಮಿನೇಟ್​ ಆಗಿದ್ದು, ಕೆಲವೇ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇದೇ ಕಾರಣಕ್ಕೆ ಸ್ನೇಹಿತರಾಗಿದ್ದವರು ವೈರಿಗಳಾಗಿದ್ದಾರೆ. ಜಗಳ, ಕಾದಾಟ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ. ಇನ್ನೊಂದೆಡೆ ತಮ್ಮ ಪರವಾಗಿರುವವರಿಗೆ ಮತ ಚಲಾಯಿಸುವಂತೆ ಸ್ಪರ್ಧಿಗಳ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಕೋರುತ್ತಿದ್ದಾರೆ.

    ಟಾಸ್ಕ್​ ಆಡುವ ವೇಳೆ ಸ್ಫರ್ಧಿ ವಿನಯ್​ ಗೌಡ ತುಸು ಅಗ್ರೆಸ್ಸಿವ್​ ಆಗಿ ಆಟವಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು. ಈ ವಿಚಾರವಾಗಿ ಅವರು ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗುತ್ತಿರುತ್ತಾರೆ. ಇದೀಗ ವಿನಯ್​ ಪರವಾಗಿ ನಟಿಯೊಬ್ಬರು ವಿಡಿಯೋ ಮಾಡಿ ಟ್ರೋಲ್​ ಆಗಿದ್ದಾರೆ.

    ಇದನ್ನೂ ಓದಿ: ಯುವನಿಧಿ ಯೋಜನೆ ಜಾರಿಗೆ ದಿನಾಂಕ ಘೋಷಿಸಿದ ಸರ್ಕಾರ

    ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ಲಿ ವಿಲನ್​ ಪಾತ್ರದ ಮೂಲಕ ಫೇಮಸ್​ ಆಗಿರುವ ಅನು ಪೂವಮ್ಮ ಅವರು ವಿನಯ್​ ಪರವಾಗಿ ವಿಡಿಯೋ ಮಾಡಿದ್ದಾರೆ. ವಿನಯ್​ ಅವರನ್ನು ಗೆಲ್ಲಿಸುವಂತೆ ಅವರು ಕೋರಿಕೊಂಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಮಾಡಿದ್ದು, ಅದರಲ್ಲಿ ವಿನಯ್​ ಅವರ ಗೆಲುವನ್ನು ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ, ಹಾಯ್ ಎಲ್ಲರೂ ಹೇಗಿದ್ದೀರಾ. ವಿನಯ್ ಬಿಗ್ ಬಾಸ್‌ನಲ್ಲಿ ಚೆನ್ನಾಗಿಯೇ ಆಡುತ್ತಾ ಇದ್ದೀಯಾ. ನಾನು ಪ್ರತಿ ದಿನ ಬಿಗ್ ಬಾಸ್​ ನೋಡುತ್ತಿದ್ದೇನೆ.  ನಿಜಕ್ಕೂ ಖುಷಿ ಆಗುತ್ತಿದೆ. ಫಿನಾಲೆಯಲ್ಲಿ ನಿನ್ನ ನೋಡುತ್ತೀನಿ, ಗಾಡ್​ ಬ್ಲೆಸ್​ ಯೂ ಎಂದಿದ್ದಾರೆ. ಇತ್ತ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಖಂಡನೆ ವ್ಯಕ್ತವಾಗಿದ್ದು, ಈ ರೀತಿ ಹೇಳುವುದಕ್ಕೆ ಎಷ್ಟು ಹಣ ತೆಗೆದುಕೊಂಡಿದ್ದೀರಿ, ವಿನಯ್​ ಹೆಂಡ್ತಿ ಬಂದು ನಿಮ್ಮ ಬಳಿ ರಿಕ್ವೆಸ್ಟ್​ ಮಾಡಿಕೊಂಡಿದ್ದಾರಾ ಎಂದು ಹಲವರು ನಟಿಗೆ ಪ್ರಶ್ನೆ ಮಾಡಿದ್ದಾರೆ.

    ಇತ್ತ ಕೆಲವರು ವಿನಯ್​ ಪರ ಕಮೆಂಟ್​ ಮಾಡಿದ್ದು, ಬಿಗ್​ಬಾಸ್​ ಸೀಸನ್​ 10ರಲ್ಲಿ ಗೆಲ್ಲುವುದು ವಿನಯ್​ ಮಾತ್ರ ಎಂದು ಬರೆದಿದ್ದಾರೆ. ಬಿಗ್ ಬಾಸ್ ಮನೆಗೆ ವಿನಯ್ ಕಾಲಿಟ್ಟಾಗಿನಿಂದ ಒಂದು ಗತ್ತನ್ನು ಕಾಪಾಡಿಕೊಂಡೆ ಬಂದಿದ್ದಾರೆ. ಅವರು ಬೆಂಕಿ ಇದ್ದಂಗೆ, ಯಾರು ಏನೇ ಹೇಳಿದ್ರೂ ನಮ್ಮ ಸಪೋರ್ಟ್​ ಅವರಿಗೆ ಎಂದು ತಮ್ಮ ನೆಚ್ಚಿನ ಸ್ಫರ್ಧಿಗೆ ಕಮೆಂಟ್​ಗಳ ಮೂಲಕ ಬೆಂಬಲ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts