More

    ಈಗ ಮದ್ಯ ಸೇವನೆ ಅಗ್ಗ; ನೂತನ ಅಬಕಾರಿ ನೀತಿಗೆ ಸಂಪುಟ ಅಸ್ತು

    ಲಖನೌ: ವಿವಿಧ ಆಹಾರ ಪದಾರ್ಥಗಳೊಂದಿಗೆ, ಪಾನೀಯಗಳು ಸಹ ನಮ್ಮ ದೈನಂದಿನ ಜೀವನದಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ. ಹಾಲು, ನೀರು, ಲಸ್ಸಿ, ಮಜ್ಜಿಗೆ ಇತ್ಯಾದಿ. ಇವುಗಳನ್ನು ನಾವು ದಿನನಿತ್ಯ ಸೇವಿಸುತ್ತೇವೆ. ಆದರೆ ಸಾಂದರ್ಭಿಕವಾಗಿ ಸೇವಿಸುವ ಕೆಲವು ಪಾನೀಯಗಳಿವೆ. ಈ ಪಾನೀಯಗಳು ಬಿಯರ್ ಅಥವಾ ವೈನ್ ಇತ್ಯಾದಿಗಳನ್ನು ಒಳಗೊಂಡಿರುತ್ತವೆ.

    ಮದ್ಯಪ್ರಿಯರು ಕೆಲವರು ಬಿಯರ್ ಅನ್ನು ತುಂಬಾ ಇಷ್ಟಪಡುತ್ತಾರೆ. ಅವರು ಬಿಯರ್ ಕುಡಿಯಲು ಮಾತ್ರ ಬಯಸುತ್ತಾರೆ. ಇದಕ್ಕೆ ಪೂರಕವೆಂಬಂತೆ ಉತ್ತರ ಪ್ರದೇಶ ಕ್ಯಾಬಿನೆಟ್ ಬುಧವಾರ 2024-25ರ ಹೊಸ ಅಬಕಾರಿ ನೀತಿಗೆ ಅನುವೋದನೆ ನೀಡಿದೆ. ಇದರಲ್ಲಿ ಸರ್ಕಾರವು ಮೊದಲ ಬಾರಿಗೆ ಬಿಯರ್​ ಮಾರಾಟ ಮಾಡುವವರು 100 ಚದರ ಅಡಿ ಜಾಗವನ್ನು ಮೀಸಲಿಡಬೇಕು ಎಂದು ತಿಳಿಸಿದೆ.

    ದೆಹಲಿ ಮಾದರಿಯಲ್ಲೇ ಇದೀಗ ಉತ್ತರಪ್ರದೇಶ ಸರ್ಕಾರವು ಅಬಕಾರಿ ನೀತಿಯನ್ನು ಜಾರಿಗೆ ತರಲು ಮುಂದಾಗಿದ್ದು, ಹೊಸ ನೀತಿಯ ಅಡಿಯಲ್ಲಿ, ಪ್ರೀಮಿಯಂ ಮದ್ಯದ ಬ್ರ್ಯಾಂಡ್‌ಗಳು ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳಲ್ಲಿಯೂ ಲಭ್ಯವಿರುತ್ತವೆ. ಇದಲ್ಲದೆ ಮದ್ಯದಂಗಡಿಗಳ ಪರವಾನಗಿ ಶುಲ್ಕವನ್ನು ಸರ್ಕಾರ ಹೆಚ್ಚಿಸಿದ್ದು, ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

    ಇದನ್ನೂ ಓದಿ: ನಾಯಕತ್ವದಿಂದ ರೋಹಿತ್​ ಶರ್ಮಾಗೆ ಕೊಕ್; ಫ್ರಾಂಚೈಸಿ ನಿರ್ಧಾರ ಸಮರ್ಥಿಸಿಕೊಂಡ ಮಹೇಲಾ ಜಯವರ್ಧನೆ

    ಇದಲ್ಲದೆ ಹೋಲ್​ಸೇಲ್​ ಮಧ್ಯದಂಗಡಿ ನಡೆಸುವವರು ಇನ್ನು ಮುಂದೆ ತಮ್ಮ ಅಂಗಡಿಯ ಪಕ್ಕದಲ್ಲಿ 100 ಚದರ ಅಡಿ ಜಾಗವನ್ನು ಹೊಂದಿದ್ದರೆ ಅಂತಹವರು ಸರ್ಕಾರಕ್ಕೆ 5 ಸಾವಿರ ರೂಪಾಯಿ ಹೆಚ್ಚುವರಿ ಶುಲ್ಕವನ್ನು ಕಟ್ಟಿ ಆಸನದ ವ್ಯವಸ್ಥೆಯನ್ನು ಮಾಡಬಹುದಾಗಿದೆ. ಇದಲ್ಲದೆ ಮದುವೆಗಳು, ಪಾರ್ಟಿಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಮಧ್ಯರಾತ್ರಿಯವರೆಗೆ ಮದ್ಯವನ್ನು ಸರಬರಾಜು ಮಾಡಬಹುದಾಗಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಆದಾಯ ಬರಲಿದೆ.

    ಇನ್ನು ಮುಂದೆ ಪೊಲೀಸ್​ ಹಾಗೂ ಅಬಕಾರಿ ಇಲಾಖೆ ಮದ್ಯದಂಗಡಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಅಥವಾ ದಾಳಿ ಮಾಡುವ ಮುನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್​ನಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ದಾಳಿ ಮಾಡಿದ ಸ್ಥಳದಲ್ಲಿ ಮದ್ಯವನ್ನು ಹೊರತುಪಡಿಸಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದಲ್ಲಿ ಘಟನೆಯನ್ನು ವೀಡಿಯೊ-ರೆಕಾರ್ಡ್ ಮಾಡುವುದು ಕಡ್ಡಾಯವಾಗಿದೆ ಎಂದು ಅನುಮೋದಿಸಲಾಗಿರುವ ನೂತನ ಅಬಕಾರಿ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts