More

    ನಾಯಕತ್ವದಿಂದ ರೋಹಿತ್​ ಶರ್ಮಾಗೆ ಕೊಕ್; ಫ್ರಾಂಚೈಸಿ ನಿರ್ಧಾರ ಸಮರ್ಥಿಸಿಕೊಂಡ ಮಹೇಲಾ ಜಯವರ್ಧನೆ

    ಮುಂಬೈ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ ಆರಂಭಿಸಿದೆ. ಇತ್ತ ಮುಂಬೈ ಇಂಡಿಯನ್ಸ್​ ರೋಹಿತ್​ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯ ಅವರನ್ನು ಕ್ಯಾಪ್ಟನ್​ ಆಗಿ ನೇಮಿಸುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

    ಇತ್ತ ರೋಹಿತ್​ ಶರ್ಮಾರನ್ನು ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿದ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್​ ಗ್ಲೋಬಲ್​ ಹೆಡ್​ ಮಹೇಲಾ ಜಯವರ್ಧನೆ ಭವಿಷ್ಯದ ದೃಷ್ಠಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಮಾತನಾಡಿದ ಮಹೇಲಾ ಜಯವರ್ಧನೆ, ಇದು ಕಠಿಣ ಹಾಗೂ ಭಾವನಾತ್ಮಕ ನಿರ್ಧಾರವಾಗಿದ್ದು, ಭವಿಷ್ಯದ ದೃಷ್ಠಿಯಿಂದ ಅತ್ಯವಶ್ಯಕವಾಗಿದೆ. ಒಂದು ಫ್ರಾಂಚೈಸಿಯಾಗಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವುದು ಕಠಿಣವಾಗಿದ್ದು, ಭವಿಷ್ಯದ ದೃಷ್ಠಿಯಿಂದ ಇದು ತೆಗೆದುಕೊಳ್ಳಲೇಬೆಕಾದ ನಿರ್ಧಾರವಾಗಿದ್ದು, ಇದು ಬೇರೆ ರೀತಿಯಲ್ಲಿ ಕಂಡಿರುತ್ತದೆ.

    Rohit Mahela

    ಇದನ್ನೂ ಓದಿ: ಐಪಿಎಲ್​ನಲ್ಲಿ ಆಡುವ ಬಗ್ಗೆ ನಿರೀಕ್ಷೆ ಮೂಡಿಸಿದ ಪಂತ್; ಒಮ್ಮೆ ಈ ವಿಡಿಯೋ ನೋಡಿ

    ಹಾರ್ದಿಕ್​ ಪಾಂಡ್ಯ ಕೆಲ ವರ್ಷಗಳ ಕಾಲ ಮುಂಬೈ ಇಂಡಿಯನ್ಸ್​ ಪರ ಆಡಿದ ಅನುಭವವನ್ನು ಹೊಂದಿದ್ದು, ಅವರಿಗೆ ತಂಡದ​ ಡ್ರೆಸ್ಸಿಂಗ್​ ರೂಮ್​​ ಹೊಸದೇನಲ್ಲ. ಒಬ್ಬ ಆಲ್​​ರೌಂಡರ್​ ಹಾಗೂ ನಾಯಕನಾಗಿ ತಂಡಕ್ಕೆ ಏನು ಕೊಡುಗೆ ನೀಡಲಿದ್ದಾರೆ ಎಂದು ನಮಗೆ ತುಂಬಾ ಚೆನ್ನಾಗಿ ತಿಳಿದಿದೆ. ಗುಜರಾತ್​ ತಂಡವನ್ನು ಮುನ್ನಡೆಸಿದ ಅವರಿಗೆ ಇದು ವಿಭಿನ್ನ ಅನುಭವ ನೀಡಲಿದೆ.

    ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲು ರೋಹಿತ್ ತಂಡದಲ್ಲಿ, ಮೈದಾನದ ಒಳಗೆ ಮತ್ತು ಹೊರಗೆ ಇರುವುದು ನಮಗೆ ಬಹಳ ಮುಖ್ಯ. ಮುಂದಿನ ದಿನಗಳಲ್ಲಿ ಅವರು ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಈ ಹಿಂದೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಕೂಡ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ತಮ್ಮ ನಾಯಕತ್ವವನ್ನು ಇನ್ನೊಬ್ಬರಿಗೆ ಬಿಟ್ಟುಕೊಟ್ಟಿದ್ದರು ಎಂದು ಹೇಳುವ ಮೂಲಕ ಫ್ರಾಂಚೈಸಿಯ ನಿರ್ಧಾರವನ್ನು ಮಹೇಲಾ ಜಯವರ್ಧನೆ ಸಮರ್ಥಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts