ಇಂದಿನಿಂದ ಭಾರತಕ್ಕೆ ಆಸೀಸ್ ಟೆಸ್ಟ್: ವಾಂಖೆಡೆಯಲ್ಲಿ ಮಹಿಳೆಯರ ಕಾದಾಟ, ಮೊದಲ ಜಯುದ ನಿರೀಕ್ಷೆಯಲ್ಲಿ ಹರ್ಮಾನ್‌ಪ್ರೀತ್ ಬಳಗ

ಮುಂಬೈ: ಪ್ರವಾಸಿ ಇಂಗ್ಲೆಂಡ್ ತಂಡವನ್ನು ಸ್ಪಿನ್ ಬಲೆಯಲ್ಲಿ ಕೆಡವಿ ಯಶಸ್ಸು ಸಾಧಿಸಿರುವ ಭಾರತ ಮಹಿಳಾ ತಂಡ 40 ವರ್ಷಗಳ ಬಳಿಕ ತವರಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಎದುರಾಗಲಿವೆ. 1984ರಲ್ಲಿ ಕೊನೆಯದಾಗಿ ಉಭಯ ತಂಡಗಳು ಭಾರತದಲ್ಲಿ ಮುಖಾಮುಖಿಯಾಗಿದ್ದವು.ಎರಡು ತಂಡಗಳು ಇದುವರೆಗೆ 10 ಬಾರಿ ಎದುರಾಗಿದ್ದು, 4 ಬಾರಿ ಆಸೀಸ್ ಗೆದ್ದರೆ, ಉಳಿದ 6 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಭಾರತ ಮೊದಲ … Continue reading ಇಂದಿನಿಂದ ಭಾರತಕ್ಕೆ ಆಸೀಸ್ ಟೆಸ್ಟ್: ವಾಂಖೆಡೆಯಲ್ಲಿ ಮಹಿಳೆಯರ ಕಾದಾಟ, ಮೊದಲ ಜಯುದ ನಿರೀಕ್ಷೆಯಲ್ಲಿ ಹರ್ಮಾನ್‌ಪ್ರೀತ್ ಬಳಗ