ಈ ಖ್ಯಾತ ನಟಿ ಮತ್ತವರ ಕುಟುಂಬಕ್ಕೆ ಕರೊನಾ ಪಾಸಿಟಿವ್​!

koel110720_2
Published on

ದೇಶದೆಲ್ಲೆಡೆ ಕರೊನಾ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿವೆ. ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ. ಸಿನಿಮಾ ಮಂದಿಗೂ ಕರೊನಾ ಗಂಟು ಬಿದ್ದಿದೆ. ಶೂಟಿಂಗ್​ ಸಂದರ್ಭದಲ್ಲಿಯೇ ಪ್ರಕರಣಗಳು ಕಂಡು ಬಂದು, ಶೂಟಿಂಗ್​ಗಳೇ ಸ್ಥಗಿತವಾದ ಉದಾಹರಣೆಗಳಿವೆ. ಇದೀಗ ಖ್ಯಾತ ನಟಿಯೊಬ್ಬರ ಇಡೀ ಕುಟುಂಬಕ್ಕೇ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.

ಹೌದು, ಬೆಂಗಾಲಿ ಮೂಲದ ನಟಿ ಕೋಯಲ್​ ಮಲ್ಲಿಕ್​ ಸೇರಿ ಅವರ ಹಿರಿಯ ನಟ ತಂದೆ ರಂಜಿತ್​ ಮಲ್ಲಿಕ್​, ತಾಯಿ ದೀಪಾ ಮಲ್ಲಿಕ್​ ಮತ್ತು ಪತಿ ಸಿಸ್ಪಾಲ್​ ಸಿಂಗ್​ಗೂ ಕರೊನಾ ಪಾಸಿಟಿವ್​ ಇರುವುದು ಖಚಿತವಾಗಿದ್ದು, ಇಡೀ ಕುಟುಂಬ ಸೆಲ್ಫ್​ ಕ್ವಾರಂಟೈನ್​ನಲ್ಲಿದೆ. ಈ ಬಗ್ಗೆ ಸ್ವತಃ ಕೋಯಲ್​ ಟ್ವಿಟರ್​ನಲ್ಲಿ ಅಧಿಕೃತವಾಗಿ ಹೇಳಿಕೊಂಡಿದ್ದು, ಆದಷ್ಟು ಬೇಗ ಗುಣಮುಖರಾಗಿ ಎಂದು ಸಾಕಷ್ಟು ಮಂದಿ ಟ್ವಿಟ್​ ಮಾಡಿದ್ದಾರೆ.

ಅಚ್ಚರಿ ವಿಚಾರ ಏನೆಂದರೆ ಕಳೆದ ಮೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದ ಕೋಯಲ್​, ಕೋವಿಡ್​ ನಡುವೆಯೂ ಮಗುವಿನ ಆರೈಕೆ ಮಾಡುತ್ತಿದ್ದಾರಾ ಅಥವಾ ಆ ಮಗುವನ್ನು ಸದ್ಯ ಪ್ರತ್ಯೇಕವಾಗಿರಿಸಿ ಆರೈಕೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ.

ಹಾಲಿವುಡ್​ನ ಖ್ಯಾತ ನಟ ಟಾಮ್​ ಹಾಂಕ್ಸ್ ಪತ್ನಿ ರಿಟಾ ವಿಲ್ಸನ್​, ಬಾಲಿವುಡ್​ನ ಕನ್ನಿಕಾ ಕಪೂರ್​, ಕಿರಣ್​ ಕುಮಾರ್, ಜೋಯಾ ಮೊರಾನಿ, ಇಂದಿರಾ ವರ್ಮಾ ದಕ್ಷಿಣ ಭಾರತದ ಹಲವು ಕಿರುತೆರೆ ಕಲಾವಿದರಿಗೂ ಕರೊನಾ ಸೋಂಕು ತಗುಲಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net