ಕೃತಿ ಶೆಟ್ಟಿಯ ಲವ್​ ಇನ್ಶೂರೆನ್ಸ್​ ; ಲವ್​ ಟುಡೇ ನಾಯಕನಿಗೆ ಜೋಡಿಯಾದ ಮಂಗಳೂರು ಹುಡುಗಿ

Krithi Shetty (8)
Published on

ಮಂಗಳೂರು ಮೂಲದ ನಟಿ ಕೃತಿ ಶೆಟ್ಟಿ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ತುಂಬ ಬಿಜಿಯಾಗಿದ್ದಾರೆ. ಹೃತಿಕ್ ರೋಷನ್ ನಾಯಕನಾಗಿದ್ದ 2019ರ ‘ಸೂಪರ್ 30’ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೃತಿ, ನಂತರ 2021ರ ತೆಲುಗಿನ ‘ಉಪ್ಪೇನಾ’ ಚಿತ್ರದಲ್ಲಿ ನಾಯಕಿಯಾದರು. ನಂತರ ಬ್ಯಾಕ್ ಟು ಬ್ಯಾಕ್ ‘ಶ್ಯಾಮ್ ಸಿಂಘಾ ರಾಯ್’, ‘ಬಂಗಾರ್ರಾಜು’, ‘ದಿ ವಾರಿಯರ್’, ‘ಕಸ್ಟಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಅದರ ಬೆನ್ನಲ್ಲೇ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಅವರು ಮೂರು ಸಿನಿಮಾಗಳಲ್ಲಿ ಬಿಜಿಯಿದ್ದಾರೆ. ಅವುಗಳಲ್ಲಿ ಒಂದಾದ ‘ಎಲ್‌ಐಸಿ - ಲವ್ ಇನ್ಶೂರನ್ಸ್ ಕಾರ್ಪೊರೇಷನ್’ ಮುಹೂರ್ತ ಕಳೆದ ಶುಕ್ರವಾರ (ಡಿ. 15) ನೆರವೇರಿದೆ. ನಟಿ ನಯನತಾರಾ ಪತಿ ವಿಘ್ನೇಶ್​ ಶಿವನ್ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಕೃತಿ, ‘ಲವ್ ಟುಡೇ’ ಖ್ಯಾತಿಯ ನಟ ಪ್ರದೀಪ್ ರಂಗನಾಥನ್‌ಗೆ ಜೋಡಿಯಾಗಿದ್ದಾರೆ.

ಜತೆಗೆ ಎಸ್‌ಜೆ ಸೂರ್ಯ ಮತ್ತು ಹಾಸ್ಯನಟ ಯೋಗಿಬಾಬು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಛಾಯಾಗ್ರಹಣ ಹಾಗೂ ಪ್ರದೀಪ್ ರಾಘವ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net