

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಬಡ್ಡೀಸ್' ಚಿತ್ರದ ಬಳಿಕ ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ನಟ ಕಿರಣ್ ರಾಜ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ "ರಾನಿ'. ಕಿರುತೆರೆಯ ಮೂಲಕ ಮನೆ ಮಾತಾಗಿರುವ ಕಿರಣ್, ಇದೇ ಮೊದಲ ಬಾರಿಗೆ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ಳಳಿದ್ದಾರೆ. ದುಬೈನಲ್ಲಿ 13 ಸಾವಿರ ಎತ್ತರದಿಂದ ಸ್ಕೆಡೈವ್ ಮಾಡುವ ಮೂಲಕ ಕಿರಣ್ "ರಾನಿ' ಟೈಟಲ್ ಲಾಂಚ್ ಮಾಡಿದ್ದರು. ಬಳಿಕ ರಿಲೀಸ್ ಆಗಿದ್ದ ಪೋಸ್ಟರ್ ಕೂಡ ಕುತೂಹಲ ಮೂಡಿಸಿತ್ತು.
ಇದೀಗ ಬುಧವಾರ (ಜು. 5) ಚಿತ್ರದ ಟೀಸರ್ ರಿಲೀಸ್ ಆಗಲಿದೆ. "ಆ್ಯಕ್ಷನ್ ಪ್ರಧಾನ ಟೀಸರ್ ಮಾಡಲಿದ್ದೇವೆ. ಜತೆಗೆ ನಾಯಕ ಕಿರಣ್ ಪಾತ್ರ ರಿವೀಲ್ ಆಗಲಿದೆ. "ರಾನಿ' ಒಂದು ಜಾನರ್ ಸಿನಿಮಾ ಅಂತ ಹೇಳಲು ಆಗುವುದಿಲ್ಲ. ಮೇಲ್ನೋಟಕ್ಕೆ ಆ್ಯಕ್ಷನ್ ಗ್ಯಾಂಗ್ಸ್ಟರ್ ಚಿತ್ರ ಅಂತನ್ನಿಸಿದರೂ ಲವ್, ್ಯಾಮಿಲಿ ಡ್ರಾಮಾ ಎಲ್ಲವೂ ಚಿತ್ರದಲ್ಲಿರಲಿದೆ' ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.
ಇದನ್ನೂ ಓದಿ : ಮಾತಿಲ್ಲದ ‘ಮಹಾಗುರು’; 36 ವರ್ಷಗಳ ನಂತರ ಮತ್ತೆ ಮೂಕಿ ಸಿನಿಮಾ
ಚಿತ್ರದಲ್ಲಿ ಕಿರಣ್ ರಾಜ್ಗೆ ಅಪೂರ್ವ, ಸಮೀಕ್ಷಾ, ರಾಧ್ಯಾ ಮೂವರು ನಾಯಕಿಯರು. ಜತೆಗೆ ರವಿಶಂಕರ್, ಮೈಕೋ ನಾಗರಾಜ್, ಉಗ್ರಂ ಮಂಜು, ಉಗ್ರಂ ರವಿ, ಬಿ. ಸುರೇಶ್, ಮಂಡ್ಯ ರಮೇಶ್, ಉಮೇಶ್, ಸುಜಯ್ ಶಾಸ್ತ್ರಿ, ಧಮೇರ್ಂದ್ರ ಅರಸ್, ಧರ್ಮಣ್ಣ, ಸೂರ್ಯ ಕುಂದಾಪುರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ರಾವೇಂದ್ರ ಕೋಲಾರ್ ಛಾಯಾಗ್ರಹಣ, ಉಮೇಶ್ ಆರ್ಬಿ ಸಂಕಲನ, ಮಣಿಕಾಂತ್ ಕದ್ರಿ ಸಂಗೀತವಿರಲಿದೆ. "ರಾನಿ'ಯಲ್ಲಿ ಆರು ೈಟ್ಗಳಿದ್ದು ವಿನೋದ್ ಮಾಸ್ಟರ್ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿವೆ.