ಅಂದಹಾಗೆ, 'ಕೆಜಿಎಫ್ 2' ಸಿನಿಮಾ ಕರ್ನಾಟಕದಲ್ಲಿ ಮಾತ್ರ ಅಲ್ಲ, ವಿಶ್ವಾದ್ಯಂತ ಏಪ್ರಿಲ್ 14 ರಂದು ತೆರೆಗಪ್ಪಳಿಸಲಿದೆ. ಈ ಸಿನಿಮಾ ಬರಿ ನಮ್ಮ ದೇಶದಲ್ಲೇ 6 ಸಾವಿರ ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆ ಎನ್ನಲಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ 'ಕೆಜಿಎಫ್ 2' ಒಟ್ಟಿಗೆ ತೆರೆ ಕಾಣಲಿರುವ ಕಾರಣ, ಚಿತ್ರ ಅಧಿಕ ಪರದೆಗಳಲ್ಲಿ ರಿಲೀಸ್ ಆಗಲಿದೆ.