

ಚಿತ್ರದುರ್ಗ: ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್-2 ಗುರುವಾರ ತೆರೆಗೆ ಬರಲಿದ್ದು, ಕೋಟೆ ನಾಡು ಚಿತ್ರದುರ್ಗದಲ್ಲಿ ಅಭಿಮಾನಿಗಳಿಂದ ಭಾರೀ ಸಿದ್ಧತೆ ನಡೆದಿದೆ.
ನಗರದ ಬಸವೇಶ್ವರ ಮತ್ತು ಪ್ರಸನ್ನ ಎರಡು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದ್ದು, ಥಿಯೇಟರ್ ಆವರಣದಲ್ಲಿ ದೊಡ್ಡ ದೊಡ್ಡ ಪ್ಲೆಕ್ಸ್, ಕಟೌಟ್ ಗಳನ್ನು ಹಾಕುವ ಮೂಲಕ KGF 2 ಚಿತ್ರವನ್ನು ಬರಮಾಡಿಕೊಳ್ಳಲು ಆತುರದಲ್ಲಿದ್ದಾರೆ. ಬಸವೇಶ್ವರ ಥಿಯೇಟರ್ ನಲ್ಲಿ ಮುಂಜಾನೆ ಮೂರು ಗಂಟೆಗೆ ಶುರುವಾದರೆ,ಚಳ್ಳಕೆರೆ ನಗರದ ರಾಮಕೃಷ್ಣ ಚಿತ್ರಮಂದಿರದಲ್ಲಿ ಬೆಳಗ್ಗಿನ 6 ಗಂಟೆ ಶೋ ಗೆ ಈಗಾಗಲೇ ಮುಂಗಡ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.
ಮುಂಜಾನೆಯಿಂದಲೇ ಸಿನಿಮಾ ಆರಂಭವಾಗುವುದರಿಂದ ಕಟೌಟುಗಳಿಗೆ ಹಾಲಿನ ಅಭಿಷೇಕ, ಪುಷ್ಪ ಮಾಲಿಕೆಗಳು, ನಿಂಬೆಹಣ್ಣನ ಹಾರ ಹಾಕಲು ತಯಾರಿ ನಡೆಸಿದ್ದಾರೆ. ಕೇಕ್ ಕಟ್ ಮಾಡಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಲು ಸಿದ್ದತೆ ನಡೆಸಿದ್ದಾರೆ.
ಇನ್ನೂ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದಿಂದ ಬೆಳಗಿನ ಉಪಹಾರವನ್ನು ಅಭಿಮಾನಿಗಳಿಗೆ ಹಂಚಲಿದ್ದಾರೆ. ಒಟ್ಟಾರೆ KGF2 ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ ದುರ್ಗದ ಯಶ್ ಅಭಿಮಾನಿಗಳು ಸಜ್ಜಾಗಿದ್ದಾರೆ.