

ಕೇರಳ: ಚಿತ್ರನಟಿಯೊಬ್ಬರಿಂದ ಅತ್ಯಾಚಾರ ಆರೋಪಕ್ಕೆ ಒಳಗಾಗಿ ತಲೆಮರೆಸಿಕೊಂಡಿರುವ ಚಿತ್ರನಟ-ನಿರ್ಮಾಪಕನ ವಿರುದ್ಧ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಮುಂದಾಗಿದ್ದಾರೆ.
ಮಲಯಾಳಂ ಚಿತ್ರನಟ ಹಾಗೂ ನಿರ್ಮಾಪಕ ವಿಜಯ್ ಬಾಬು ವಿರುದ್ಧ ಕೇರಳ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಮುಂದಾಗಿದ್ದು, ಶೀಘ್ರದಲ್ಲೇ ನಟ ಪೊಲೀಸರಿಂದ ಬಂಧನಕ್ಕೆ ಒಳಗಾಗುವ ಸಾಧ್ಯತೆಗಳು ಗೋಚರಿಸಿವೆ.
ವಿಜಯ್ ಬಾಬು ವಿರುದ್ಧ ಸಹನಟಿಯೊಬ್ಬರು ಒಂದು ತಿಂಗಳ ಹಿಂದೆಯೇ ಅತ್ಯಾಚಾರ ದೂರು ದಾಖಲಿಸಿದ್ದು, ಅಂದಿನಿಂದಲೂ ನಟ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದರು. ಆರೋಪಿ ಜಾರ್ಜಿಯಾ, ಗೋವಾ, ದುಬೈ, ಬೆಂಗಳೂರು ಇತ್ಯಾದಿ ಕಡೆ ಸಂಚರಿಸಿ ತಲೆಮರೆಸಿಕೊಂಡಿರುವ ಸುಳಿವು ಲಭಿಸಿದ್ದು, ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುವುದು ಎಂದು ಕೊಚ್ಚಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.