ನಾಳೆ ಭಾರತ್ ಬಂದ್​!: ಯಾರಿಂದ ಕರೆ, ಏನು ಬೇಡಿಕೆ?

Bharath Bandh
Published on

ನವದೆಹಲಿ: ಒಂದಲ್ಲ ಒಂದು ಕಾರಣಕ್ಕೆ ಅಥವಾ ಬೇಡಿಕೆಗೆ ಆಗ್ರಹಿಸಿ ರಾಜ್ಯ ಬಂದ್ ಇಲ್ಲವೇ ದೇಶ ಬಂದ್​ನಂಥ ಕರೆಗಳು ಆಗಾಗ ಮೊಳಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಕರೆ ಇದೀಗ ಕೇಳಿ ಬಂದಿದ್ದು, ನಾಳೆ ಭಾರತ್ ಬಂದ್​ ಆಗಲಿದೆ ಎನ್ನಲಾಗಿದೆ.

ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ (ಬಿಎಎಂಸಿಇಎಫ್​) ಮೇ 25ರಂದು ಭಾರತ್ ಬಂದ್​ ನಡೆಸಬೇಕು ಎಂದು ಕರೆ ನೀಡಿದೆ. ಕೇಂದ್ರ ಸರ್ಕಾರದ ಕ್ರಮವೊಂದನ್ನು ವಿರೋಧಿಸಿ ಈ ಸಂಘಟನೆ ಭಾರತ್ ಬಂದ್​ಗೆ ಕರೆ ನೀಡಿದೆ.

ಕೇಂದ್ರ ಸರ್ಕಾರ ಇತರ ಹಿಂದುಳಿದ ವರ್ಗಗಳಿಗಾಗಿ ಜಾತಿ ಆಧಾರಿತ ಜನಗಣತಿ ನಡೆಸದೇ ಇರುವುದನ್ನು ವಿರೋಧಿಸಿ ಈ ಸಂಘಟನೆಯವರು ಭಾರತ್ ಬಂದ್​ಗೆ ಕರೆ ನೀಡಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ಬೇಡಿಕೆಗಳನ್ನು ಸಂಘಟನೆ ಮುಂದಿಟ್ಟಿದೆ.

ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಸ್ಥಗಿತಗೊಳಿಸುವುದು. ಹಳೇ ಪಿಂಚಣಿ ಪದ್ಧತಿಯನ್ನು ಮರುಜಾರಿಗೆ ತರುವುದು. ಲಸಿಕೀಕರಣ ಕಡ್ಡಾಯ ತೆಗೆದುಹಾಕುವುದು ಸೇರಿದಂತೆ ಇತರ ಕೆಲವು ಬೇಡಿಕೆಗಳನ್ನೂ ಇವರು ಪ್ರಸ್ತಾಪಿಸಿ ಭಾರತ್​ ಬಂದ್​​ಗೆ ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net