‘ವಾಸಂತಿ ನಲಿದಾಗ’ ಚಿತ್ರದ 'ಕೇಳ್ರಪ್ಪೋ ಕೇಳಿ’ ಹಾಡಿಗೆ ನಾಲ್ಕು ಲಕ್ಷ ಹಿಟ್ಸ್​

Vasanthi Nalidaaga - Final
Published on

ಬೆಂಗಳೂರು:'ವಾಸಂತಿ ನಲಿದಾಗ' ಚಿತ್ರದ 'ಕೇಳ್ರಪ್ಪೋ ಕೇಳಿ ...' ಎಂಬ ಹಾಡು ಜುಲೈ 23ರಂದು ಯೂಟ್ಯೂಬ್​ನ ಝಂಕಾರ್​ ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿತ್ತು. ಶಶಾಂಕ್​ ಶೇಷಗಿರಿ ಮತ್ತು ಪ್ರಿಯಾಂಕಾ ಶ್ರೀಗುರು ಹಾಡಿರುವ ಈ ಹಾಡು ಇದೀಗ ನಾಲ್ಕು ಲಕ್ಷ ವೀಕ್ಷಣೆ ಕಂಡಿದೆ.

‘ವಾಸಂತಿ ನಲಿದಾಗ’ ಚಿತ್ರದ ಚಿತ್ರೀಕರಣ ಮುಗಿದು, ಇದೀಗ ಪೋಸ್ಟ್​ ಪ್ರೊಡಕ್ಷನ್​ ಕೆಲಸ ಪ್ರಗತಿಯಲ್ಲಿದೆ. ಈಗ ಚಿತ್ರತಂಡವು ‘ಕೇಳ್ರಪ್ಪೋ ಕೇಳಿ ...’ ಎಂಬ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ನಾಂದಿ ಹಾಡಿದೆ. ಗೌಸ್ ಪೀರ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಶ್ರೀಗುರು ಸಂಗೀತ ಸಂಯೋಜಿಸಿದ್ದಾರೆ.

'ವಾಸಂತಿ ನಲಿದಾಗ' ಚಿತ್ರದಲ್ಲಿ ನಾಯಕ-ನಾಯಕಿಯರಾಗಿ ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ ನಟಿಸಿದ್ದಾರೆ. ಸಾಯಿಕುಮಾರ್​, ಸುಧಾರಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೇನುಗೂಡು ಬ್ಯಾನರ್​ನಡಿ ಸಿನಿಮಾ ನಿರ್ಮಾಣವಾಗಿದ್ದು, ಜೇನುಗೂಡು ಕೆ.ಎನ್ ಶ್ರೀಧರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ರವೀಂದ್ರ ವಂಶಿ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್ ಮತ್ತು ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣ ಇರುವ ಈ ಚಿತ್ರವನ್ನು ಸೆಪ್ಟೆಂಬರ್ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net