ಕೀರ್ತಿ ಸಂಭಾವನೆ 3 ಕೋಟಿ ರೂಪಾಯಿ!; ಮಹಾನಟಿಗೆ ಭರ್ಜರಿ ಡಿಮಾಂಡ್

Keerthi
Published on

ಸಿನಿಮಾಗಳ ರೀತಿಯಲ್ಲಿ ಸಿನಿಮಾ ಮಂದಿ ಪಡೆಯುವ ಸಂಭಾವನೆಯೂ ಆಗಾಗ ಸದ್ದು ಮಾಡುತ್ತಿರುತ್ತದೆ. ಅವರು ಅಷ್ಟು ಕೋಟಿ, ಇವರು ಇಷ್ಟು ಕೋಟಿ ಎಂದೆಲ್ಲ ಸುಮಾರು ಸುದ್ದಿಗಳು ಹರಿದಾಡುತ್ತಿರುತ್ತವೆ. ಈಗ ರಾಷ್ಟ್ರ ಪ್ರಶಸ್ತಿ ವಿಜೇತೆ, ದಕ್ಷಿಣದ ಖ್ಯಾತ ನಟಿ ಕೀರ್ತಿ ಸುರೇಶ್ ಸರದಿ. ಅದೇನೆಂದರೆ, ಚಿತ್ರವೊಂದರಲ್ಲಿ ನಟಿಸಲು ಬರೋಬ್ಬರಿ ಮೂರು ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ!

ಹೌದು, ಕೀರ್ತಿ ದಕ್ಷಿಣದ ಬೇಡಿಕೆಯ ನಟಿ. ಸದ್ಯ ರಜನಿಕಾಂತ್ ಜತೆಗಿನ ‘ಅಣ್ಣಾತ್ತೆ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮಾಲಿವುಡ್​ನಲ್ಲಿ ಮೋಹನ್​ಲಾಲ್ ಜತೆಗಿನ ‘ಮರಕ್ಕರ್’ ಚಿತ್ರದ ಕೆಲಸವೂ ಮುಗಿದಿದೆ. ಈ ನಡುವೆ ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿಯೂ ಕೀರ್ತಿ ಬಿಜಿಯಾಗಿದ್ದಾರೆ. ಈ ಎಲ್ಲ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮೊತ್ತ ಕಲೆಹಾಕುವ ಸಿನಿಮಾಗಳೇ. ಅದನ್ನೇ ಟ್ರಂಪ್​ಕಾರ್ಡ್ ಮಾಡಿಕೊಂಡಿರುವ ಕೀರ್ತಿ, ಇದೀಗ ಸದ್ದಿಲ್ಲದೆ ಸಂಭಾವನೆ ಏರಿಸಿಕೊಂಡಿದ್ದಾರೆ.

ನಾಣಿ ನಾಯಕನಾಗಿ ನಟಿಸಲಿರುವ ‘ದಸರಾ’ ಚಿತ್ರದಲ್ಲಿ ಕೀರ್ತಿ ನಾಯಕಿಯಾಗಿ ನಟಿಸುವುದಕ್ಕೆ ಬರೋಬ್ಬರಿ ಮೂರು ಕೋಟಿ ರೂ. ಸಂಭಾವನೆ ಡಿಮಾಂಡ್ ಮಾಡಿದ್ದಾರಂತೆ. ಚಿತ್ರತಂಡದಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್ ಶುರುವಾಗಲಿದೆ. ನವ ನಿರ್ದೇಶಕ ಶ್ರೀಕಾಂತ್ ಒದೆಲಾ ನಿರ್ದೇಶಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net