ಕನ್ನಡಿಗರ ತೆಲುಗು ಸಿನಿಮಾ; ಬೆಂಗಳೂರಿನಲ್ಲೇ ನಡೆದಿದೆ ‘ನಚ್ಚಿನವಾಡು’ ಚಿತ್ರೀಕರಣ

nachinavadu
Published on

ಬೆಂಗಳೂರು: ಲಕ್ಷ್ಮಣ್ ಚಿನ್ನ ನಟಿಸಿ, ನಿರ್ದೇಶಿಸಿರುವ ಕನ್ನಡದ ಹುಡುಗಿ ಕಾವ್ಯ ರಮೇಶ್ ನಾಯಕಿಯಾಗಿರುವ ಚಿತ್ರ ‘ನಚ್ಚಿನವಾಡು’. ವಿಶೇಷ ಅಂದರೆ ಈ ಚಿತ್ರದಲ್ಲಿ ಕಾವ್ಯ ರಮೇಶ್ ಜತೆಗೆ ಬಹುತೇಕ ಕನ್ನಡದ ಕಲಾವಿದರೇ ನಟಿಸಿದ್ದಾರೆ. ಹಾಗೂ ಚಿತ್ರದ ಶೇ. 90ರಷ್ಟು ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಸಲಾಗಿದೆ.

‘ಚೌಕಾಬಾರ’ ಸೇರಿ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಕಾವ್ಯ ರಮೇಶ್ ಅವರಿಗಿದು ಚೊಚ್ಚಲ ತೆಲುಗು ಚಿತ್ರ. ‘ನಾನು ಅನು ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಜನರೇಶನ್ ಗ್ಯಾಪ್‌ನಿಂದ ಉಂಟಾಗುವ ಮಾನಸಿಕ ಒದ್ದಾಟದ ಕುರಿತ ಕಥೆಯಿದು. ಮಾನಸಿಕ ಒದ್ದಾಟದಿಂದ ಹೇಗೆ ಹೊರಬರಬೇಕು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ. ಹೆಣ್ಣುಮಕ್ಕಳಿಗೆ ಹೆಚ್ಚು ಕನೆಕ್ಟ್ ಆಗುವ ಕಥೆ’ ಎಂದು ಮಾಹಿತಿ ನೀಡಿದರು. ನಟ, ನಿರ್ದೇಶಕ ಲಕ್ಷ್ಮಣ್ ಚಿನ್ನ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಿದ ಕುರಿತು ಅನುಭವ ಹಂಚಿಕೊಂಡರು.

ಯುವನಟ ದರ್ಶನ್ ಅವರಿಗೆ ‘ನಚ್ಚಿನವಾಡು’ ಮೊದಲ ಸಿನಿಮಾ. ಬೋಲ್ಡ್ ಪಾತ್ರದಲ್ಲಿ ನಟಿಸಿರುವ ಬಗ್ಗೆ ಹೇಳಿಕೊಂಡರು ದರ್ಶನ್. ಉಳಿದಂತೆ ಪ್ರೇರಣಾ ಭಟ್, ಲಲಿತಾ ನಾಯಕ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net