ಎರಡನೇ ಮಗುವಿನ ಫೋಟೊ ರಿವಿಲ್ ಮಾಡಿದ ಕರೀನಾ ಕಪೂರ್

kareena
kareena
Published on

ಮುಂಬೈ: ಇತ್ತೀಚೆಗಷ್ಟೇ ಎರಡನೇ ಮಗುವಿನ ತಾಯಿಯಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ಇದೀಗ ಮಗುವಿನ ಫೋಟೊವನ್ನು ರಿವಿಲ್ ಮಾಡಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಫೋಟೊ ಹಂಚಿಕೊಂಡಿರುವ ಕರೀನಾ ಹೆಣ್ಣುಮಕ್ಕಳಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ಅಮ್ಮನ ಅಪ್ಪುಗೆಯಲ್ಲಿ ಮಲಗಿರುವ ಮುಂಚಕಿನ್ ಪೂರ್ತಿ ಮುಖವನ್ನು ತೋರಿಸಿಲ್ಲ. ಮಗುವಿನ ಮುಖ ತೋರಿಸಿದ್ದರೆ ಚೆನ್ನಾಗಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಫೆಬ್ರವರಿ 21 ರಂದು ಕರೀನಾ ಕಪೂರ್ ಎರಡನೇ ಮಗುವಿಗೆ ಜನ್ಮ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net