

‘ಮಾ.8ರ ಮಹಿಳಾ ದಿನವ ಕೇವಲ ಒಂದೇ ದಿನ ಆಚರಿಸುವಂಥದ್ದಲ್ಲ. ಅದು ನಿತ್ಯದ ಸಂಭ್ರಮ, ಸಡಗರ’- ಹೀಗೆ ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತ ಮಾಡಬೇಡಿ ಎಂಬುದು ಸಿನಿಮಾ, ಕಿರುತೆರೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಮಾತು. ಏಕೆ ಎಂಬುದನ್ನು ಅವರೇ ವಿಜಯವಾಣಿ ಜತೆ ಹೇಳಿಕೊಂಡಿದ್ದಾರೆ..
ವೈಯಕ್ತಿಕವಾಗಿ ಹೆಣ್ಣಾಗಿದ್ದಕ್ಕೆ ನನಗೆ ಹೆಚ್ಚು ಖುಷಿಯಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮನೆ ಮತ್ತು ಮಾಡುತ್ತಿರುವ ಕೆಲಸ ಎರಡನ್ನೂ ಅಷ್ಟೇ ಜವಾಬ್ದಾರಿಯುತವಾಗಿ ನಿಭಾಯಿಸುವ ಶಕ್ತಿ ಹೆಣ್ಣು ಪಡೆದುಕೊಂಡಿದ್ದಾಳೆ. ತಾರತಮ್ಯ ಇಲ್ಲದೇ ಎಲ್ಲ ಕಡೆಗಳಲ್ಲಿ ಅವಕಾಶ ಗಳನ್ನು ಪಡೆದುಕೊಳ್ಳುತ್ತಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿ ಮುನ್ನುಗ್ಗುತ್ತಿದ್ದಾಳೆ. ಇದೆಲ್ಲದರ ಜತೆಗೆ ಹೆಣ್ಣು ಯಾರ ಮೇಲೂ ಅವಲಂಬಿತವಾಗದೇ ಆರ್ಥಿಕವಾಗಿ ಗಟ್ಟಿ ಮತ್ತು ಸಬಲಳಾಗಬೇಕಿದೆ. ನನ್ನ ಇಷ್ಟೆಲ್ಲ ಪ್ರಗತಿಗೆ ಮನೆಯಲ್ಲಿನ ನನ್ನ ಅಪ್ಪ, ಅಮ್ಮನೇ ಕಾರಣ. ನನ್ನ ಕುಟುಂಬದ ಸಂಸ್ಕಾರದಿಂದಲೇ ಇದೆಲ್ಲವೂ ಸಾಧ್ಯವಾಗಿದ್ದು. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ.
| ಅದಿತಿ ಪ್ರಭುದೇವ