More

    ಹೆಣ್ಮಕ್ಳೇ ಸ್ಟ್ರಾಂಗು ಗುರು | ನನ್ನ ಕನಸುಗಳಿಗೆ ಮನೆಯವರೇ ರೆಕ್ಕೆಗಳಾಗಿದ್ದಾರೆ: ಸೋನು ಗೌಡ

    ಹೆಣ್ಮಕ್ಳೇ ಸ್ಟ್ರಾಂಗು ಗುರು!

    ‘ಮಾ.8ರ ಮಹಿಳಾ ದಿನವ ಕೇವಲ ಒಂದೇ ದಿನ ಆಚರಿಸುವಂಥದ್ದಲ್ಲ. ಅದು ನಿತ್ಯದ ಸಂಭ್ರಮ, ಸಡಗರ’- ಹೀಗೆ ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತ ಮಾಡಬೇಡಿ ಎಂಬುದು ಸಿನಿಮಾ, ಕಿರುತೆರೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಮಾತು. ಏಕೆ ಎಂಬುದನ್ನು ಅವರೇ ವಿಜಯವಾಣಿ ಜತೆ ಹೇಳಿಕೊಂಡಿದ್ದಾರೆ..

    ನನ್ನ ಕನಸುಗಳಿಗೆ ಮನೆಯವರೇ ರೆಕ್ಕೆಗಳಾಗಿದ್ದಾರೆ…

    ಮಹಿಳೆ ಅಂದ ತಕ್ಷಣ ಅವರನ್ನು ನೋಡುವ ರೀತಿ ಬೇರೆ ಇದೆ. ಅವರಿಗೆ ಎಲ್ಲವೂ ಕಷ್ಟಕರ ಅನ್ನೋ ಮಾತಿದೆ. ಆದರೆ, ಮಹಿಳೆಗೆ ಇರುವ ಪವರ್ ಮತ್ಯಾರಿಗೂ ಇಲ್ಲ. ಹಾಗಂತ ಇಲ್ಲಿ ಪುರುಷನನ್ನು ಜರಿಯುತ್ತಿಲ್ಲ. ಯಾವುದೇ ಕೆಲಸ ಅಂತ ಬಂದರೂ ಪುರುಷನಿಗೆ ಸರಿಸಮನಾಗಿ ಮಹಿಳೆ ನಿಲ್ಲುತ್ತಿದ್ದಾಳೆ. ಶಿಕ್ಷಣದ ವಿಚಾರಕ್ಕೆ ಬಂದರೆ ಪ್ರತಿ ವರ್ಷ ಹುಡುಗಿಯರದ್ದೇ ಮೇಲುಗೈ. ನನಗೂ ಅದೊಂದು ಹೆಮ್ಮೆಯ ವಿಚಾರ. ಮಹಿಳಾ ಸ್ವಾತಂತ್ರ್ಯ ಎಂಬ ವಿಚಾರ ಬಂದಾಗ, ನಮ್ಮ ಮನೆಯಲ್ಲಿ ನಾನು ಫ್ರೀ ಬರ್ಡ್. ನನ್ನ ಕನಸುಗಳಿಗೆ ಮನೆಯವರೇ ರೆಕ್ಕೆಗಳಾಗಿದ್ದಾರೆ. ಆದರೆ, ಇಂದಿಗೂ ಸಾಕಷ್ಟು ಮನೆಗಳಲ್ಲಿ ಹೆಣ್ಣುಮಕ್ಕಳು ಬಂಧಿಯಾಗಿದ್ದಾರೆ. ಅವರ ಸಾಧನೆಯ ಕನಸಿಗೆ ಅಂಕುಶ ಹಾಕಲಾಗುತ್ತಿದೆ. ಹೆಣ್ಣು ಮನೆಗಷ್ಟೇ ಸೀಮಿತ, ನಾಲ್ಕು ಗೋಡೆಯ ಮಧ್ಯೆಯೇ ಅವಳಿರಬೇಕು ಎಂಬ ಕೆಟ್ಟ ಸಂಪ್ರದಾಯ ಆಚರಣೆಯಲ್ಲಿದೆ. ಆಕೆಗೂ ಕನಸುಗಳಿರುತ್ತವೆ. ಸಾಧಿಸಬೇಕಾದ ಸಾಕಷ್ಟು ಆಸೆ, ಗುರಿಗಳಿರುತ್ತವೆ. ಹಾಗಾಗಿ ಅವುಗಳಿಗೂ ಬೆಂಬಲಿಸುವ ಮನಸ್ಸು ಎಲ್ಲರದ್ದಾಗಲಿ.

    | ಸೋನು ಗೌಡ

    ‘ಇನ್ನು ನಮ್ದೇನಿದೆ?’ ಎಂದು ನಟ ರಿಷಬ್​ ಶೆಟ್ಟಿ ಬೇಸರದಿಂದ ಹೇಳಿದ್ಯಾಕೆ?; ‘ಹೀರೋ’ಗೆ ವಿಲನ್ ಆಗಿ ಕಾಡುತ್ತಿರುವುದ್ಯಾರು?

    ಅಶೋಕವನದಲ್ಲಿ ಮನರಂಜನೆಯ ಜೋಕಾಲಿ; ಹೀರೋ ಸಿನಿಮಾ ವಿಮರ್ಶೆ

    ದ್ವೇಷ-ಪ್ರೀತಿಯ ಹದವಾದ ಮಿಶ್ರಣ; ‘ರಕ್ತ ಗುಲಾಬಿ’ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts