ಕ್ರೖೆಂ ಥ್ರಿಲ್ಲರ್​ನಲ್ಲಿ ಬೆಬೋ ಕರೀನಾ ಕಪೂರ್!

Kareena
Published on

ಈವರೆಗೂ ಬಾಲಿವುಡ್ ಬೆಬೋ ಕರೀನಾ ಕಪೂರ್, ನಾಯಕ ನಟರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ನಾಯಕಿ ಪ್ರಧಾನ ಸಿನಿಮಾಗಳನ್ನು ಮಾಡಿದ್ದು ತೀರಾ ಕಡಿಮೆ. ಇದೀಗ ಕ್ರೖೆಂ ಥ್ರಿಲ್ಲರ್ ಶೈಲಿಯ ನಾಯಕಿ ಪ್ರಧಾನ ಸಿನಿಮಾದಲ್ಲಿ ನಟಿಸಲು ಕರೀನಾ ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ವಿದ್ಯಾ ಬಾಲನ್ ನಟನೆಯ ‘ಕಹಾನಿ’ ಚಿತ್ರ ನಿರ್ದೇಶಿಸಿದ್ದ ಸುಜಯ್ ಘೋಷ್, ಈ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಈಗಾಗಲೇ ಚಿತ್ರದ ಒಂದೆಳೆ ಕೇಳಿಯೇ ನಟಿಸುವುದಕ್ಕೆ ಒಪ್ಪಿಗೆ ಸೂಚಿಸಿರುವ ಕರೀನಾ, ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮ ವಾಗದ ಈ ಚಿತ್ರದಲ್ಲಿ ಜೈದೀಪ್ ಅಹ್ಲವಾತ್, ವಿಜಯ್ ವರ್ಮ ಪ್ರಮುಖ ಪಾತ್ರದಲ್ಲಿರಲಿದ್ದಾರೆ. ದಾರ್ಜಿಲಿಂಗ್, ಕಾಲಿಂಪೋಂಗ್ ಸುತ್ತ ಮುತ್ತ ಚಿತ್ರದ ಶೂಟಿಂಗ್ ನಡೆಸಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net