ಹೌದು, ಶಿವಣ್ಣ ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಆಗಿರಲಿದ್ದಾರೆ ಎಂಬುದು ಕೂಡಾ ಅಧಿಕೃತವಾಗಿ ಘೋಷಿಸಲಾಗಿದೆ. ಅಂದಹಾಗೆ, ಬೆಂಗಳೂರಿನಲ್ಲಿ ಮಾ. 27 ರಂದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಈ ಸಿನಿಮಾದ ಕಲಾವಿದರಾದ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಹಾಗೆ ಮುಂತಾದವರು ಭಾಗಿ ಆಗಲಿದ್ದಾರೆ ಎಂಬ ಮಾಹಿತಿ ಇದೆ. ಹಾಗೂ, ಬೇರೆ ಬೇರೆ ರಾಜ್ಯಗಳಿಂದ ಪತ್ರಕರ್ತರನ್ನು, ಅಭಿಮಾನಿಗಳನ್ನು ಸಹ ಈ ಟ್ರೈಲರ್ ಇವೆಂಟ್ಗೆ ಆಹ್ವಾನಿಸಲಾಗಿದೆ. ಇನ್ನು, ಕೆಲ ಗಂಟೆಗಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಒಂದು ವಿಡಿಯೋವನ್ನು ಹಂಚಿಕೊಂಡು ಮಾ. 27 ರಂದು ಸಂಜೆ 6.40 ಕ್ಕೆ ಟ್ರೈಲರ್ ಲಾಂಚ್ ಎಂದು ಕೂಡಾ ಘೋಷಿಸಿದೆ.