'ರೂಪಾಯಿ' ಚಿತ್ರದಿಂದ ಬಂತು 'ಖಾರಾಬಾತ್​' ಹಾಡು; ಚಿತ್ರ ಫೆ.10ಕ್ಕೆ ತೆರೆಗೆ

Rupayi 1
Published on

ಬೆಂಗಳೂರು: ಖಾರಾಬಾತ್​ ಅಂದರೆ ಕೆಲವರಿಗೆ ವಿಶೇಷ ಪ್ರೀತಿಯಾದರೆ, ಇನ್ನೂ ಕೆಲವರಿಗೆ ಅದನ್ನು ಕಾಂಕ್ರೀಟ್​ ಎನ್ನುತ್ತಾರೆ. ಈಗ ಅದೇ ಖಾರಾಬಾತ್​ ಒಂದು ಹಾಡಾಗಿದೆ. ಅಷ್ಟೇ ಅಲ್ಲ, ಯೂಟ್ಯೂಬ್​ನ ಆನಂದ್​ ಆಡಿಯೋದಲ್ಲಿ ಬಿಡಗುಡೆಯೂ ಆಗಿದೆ.

ಅಂದಹಾಗೆ, 'ಖಾರಾಬಾರ್​' ಹಾಡಾಗಿರುವುದು 'ರೂಪಾಯಿ' ಎಂಬ ಹೊಸಬರ ಚಿತ್ರದಲ್ಲಿ. ಅದೇ 'ರೂಪಾಯಿ'. ಇತ್ತೀಚೆಗಷ್ಟೇ ಧನಂಜಯ್​, ಈ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದರು. ಈಗ ಹಾಡಿನ ಸರದಿ. ಆನಂದ್ ರಾಜಾವಿಕ್ರಮ್​ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ್​ ಜಗದಾಲ್​ ಸಾಹಿತ್ಯ ರಚಿಸಿದ್ದು, ಸುಪ್ರಿಯಾ ರಾಮ್​ ಹಾಡಿದ್ದಾರೆ.

ರೂಪಾಯಿಯ ಮಹತ್ವ ಸಾರುವ 'ರೂಪಾಯಿ' ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್​ ಮುಂತಾದ ಅಂಶಗಳಿದ್ದು, ಚಿತ್ರ ಫೆಬ್ರವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಚಿತ್ರದ ಟ್ರೇಲರ್ ಫೆಬ್ರವರಿ 1 ರಂದು ಬಿಡುಗಡೆ ಆಗಲಿದೆ.

ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ, ಹರೀಶ್ ಬಿ.ಕೆ ಮತ್ತು ವಿನೋದ್ ಎನ್ ನಿರ್ಮಿಸಿರುವ 'ರೂಪಾಯಿ' ಚಿತ್ರವನ್ನು ವಿಜಯ್ ಜಗದಾಲ್ ನಿರ್ದೇಶನ ಮಾಡಿದ್ದಾರೆ. ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಕೃಷಿ ತಾಪಂಡ ನಟಿಸಿದ್ದು, ಮಿಕ್ಕಂತೆ ಚಂದನ ರಾಘವೇಂದ್ರ, ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಮುಂತಾದವರಿದ್ದಾರೆ. ಆರ್​.ಡಿ. ನಾಗಾರ್ಜುನ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net