'ಧಮಾಕ' ಚಿತ್ರದಿಂದ ಬಂತು ಮತ್ತೊಂದು ಹಾಡು ...

Dhamaka - Final
Published on

ಬೆಂಗಳೂರು: 'ನಾನು ಮತ್ತು ಗುಂಡ' ಚಿತ್ರದ ನಂತರ ಶಿವರಾಜ್​ ಕೆ.ಆರ್​. ಪೇಟೆ ಬೇರೆ ಯಾವುದೇ ಚಿತ್ರದಲ್ಲೂ ಹೀರೋ ಆಗಿರಲಿಲ್ಲ. ಈಗ ಅವರು 'ಧಮಾಕ' ಎಂಬ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಹೊಸ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಹಿಂದೆ ಇದೇ ಚಿತ್ರದ 'ತುಕಾಲಿ ಸಿಂಗಿಂಗ್' ಎಂಬ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತಂತೆ. ಇದೀಗ ಸಿದ್ದು ಮೂಲಿಮನಿ ಹಾಗೂ ಪ್ರಿಯಾ ಆಚಾರ್ ಹೆಜ್ಜೆ ಹಾಕಿರುವ 'ನಾನು ಹೋಗೋಕು ಮೊದ್ಲು ...' ಎಂಬ ಹಾಡು ಬಿಡುಗಡೆಯಾಗಿದೆ.

ಈ ಹಾಡಿಗೆ ನಿರ್ದೇಶಕ ಲಕ್ಷ್ಮೀ ರಮೇಶ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಗೂ ಮಾನಸ ಹೊಳ್ಳ ಧ್ವನಿಯಾಗಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಮಾಡಿದ್ದಾರೆ.

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿರುವ ನಯನಾ ಶರತ್, 'ಧಮಾಕ' ಸಿನಿಮಾದಲ್ಲಿ ಶಿವರಾಜ್ ಕೆ.ಆರ್ ಪೇಟೆ ಜೊತೆ ನಟಿಸ್ತಿದ್ದಾರೆ. ಉಳಿದಂತೆ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್‌ ತುಮ್ಮಿನಾಡು, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ.

ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಹಾಲೇಶ್ ಛಾಯಾಗ್ರಹಣ, ವಿನಯ್ ಕೂರ್ಗ್ ಸಂಕಲನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net