ನಿರ್ಮಾಪಕ ರಾಮು ನಿಧನ: ಮಾಲಾಶ್ರೀಗೆ ಭಾವುಕ ಪತ್ರ ಬರೆದ ನಟಿ ಶ್ರುತಿ

shruthi and malashree
Published on

ಬೆಂಗಳೂರು: ಸಿನಿಮಾ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಗಂಡ ರಾಮು ಅವರು ಕೋವಿಡ್19 ಸೋಂಕಿನಿಂದ ಕಳೆದ ಸೋಮವಾರ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ನಟಿ ಶ್ರುತಿ ಅವರು ಮಾಲಾಶ್ರೀ ಅವರಿಗೆ ಭಾವುಕ ಪತ್ರ ಬರೆದಿದ್ದಾರೆ.

ತಾವು ಬರೆದಿರುವ ಪತ್ರವನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿರುವ ಶ್ರುತಿ ಅವರು, ತಮ್ಮ ಗೆಳತಿ ಮಾಲಾಶ್ರೀಗೆ ಧೈರ್ಯ ನೀಡಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನಿನ್ನ ಕಣ್ಣೀರು ಒರೆಸಲು ನಾನು ಪಕ್ಕದಲ್ಲಿರುವುದಕ್ಕೆ ಸಾಧ್ಯವಾಗದ ಈ ಪರಿಸ್ಥಿತಿಗೆ ನನ್ನ ದಿಕ್ಕಾರವಿರಲಿ ಎಂದು ಪರೋಕ್ಷವಾಗಿ ಕರೊನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರಲ್ಲೂ ಒಂದು ಕಳಕಳಿಯ ಮನವಿ, ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ. ಹಾಗೂ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಮೆಂಟ್ ಮಾಡುವುದರ ಬದಲು ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ ಎಂದು ಮಾಲಶ್ರೀ ಬಗ್ಗೆ ಇಲ್ಲಸಲ್ಲದನ್ನು ಮಾತನಾಡಿ ಮನ ನೋಯಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net