More

    ಬೆಡ್​, ಆಕ್ಸಿಜನ್​ ಒದಗಿಸುವುದು 100 ಕೋಟಿ ಬಜೆಟ್​ನ ಚಿತ್ರದಲ್ಲಿ ನಟಿಸುವುದಕ್ಕಿಂತ ದೊಡ್ಡದೆಂದ ಸೋನು ಸೂದ್​

    ಮುಂಬೈ: ನಟ ಸೋನು ಸೂದ್ ಮತ್ತೆ ಸಹಾಯಕ್ಕೆ ಸಿದ್ಧರಾಗಿದ್ದಾರೆ. ಕಳೆದ ವರ್ಷ ನೂರಾರು ಕೆಲಸ ಮಾಡಿದ್ದ ಅವರು, ಎರಡನೇ ಅಲೆಯ ಸಂದರ್ಭದಲ್ಲಿಯೂ ತಮ್ಮ ಮಾನವೀಯ ಗುಣವನ್ನು ಚಾಚಿದ್ದಾರೆ. ಬೆಡ್​ ವ್ಯವಸ್ಥೆ ಮತ್ತು ಆಕ್ಸಿಜನ್ ವ್ಯವಸ್ಥೆ ಸಿಗದ ಕೋವಿಡ್ ಸೋಂಕಿತರಿಗೆ ಕೈಲಾದ ಮಟ್ಟಿಗೆ ಬೆಡ್​ ಮತ್ತು ಆಕ್ಸಿಜನ್ ಪೂರೈಕೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

    ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ಕರೊನಾ ಪಾಸಿಟಿವ್​: ನನ್ನ ಬಗ್ಗೆ ಚಿಂತಿಸದಿರಿ ಎಂದ ಟಾಲಿವುಡ್​ ನಟ

    ಹೌದು, ಕೋವಿಡ್ ಸೋಂಕಿನಿಂದ ಸೋನು ಗುಣಮುಖರಾಗಿ ಬಂದಿದ್ದಾರೆ. ಆ ನೋವನ್ನು, ಯಾತನೆಯನ್ನು ಅನುಭವಿಸಿದ್ದಾರೆ. ಹೀಗಾಗಿ ಇದೀಗ ಕೋವಿಡ್ ರೋಗಿಗಳ ಆರೈಕೆಗೆ ನಿಂತಿದ್ದಾರೆ. ಮುಂಬೈ ಸೇರಿ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಸೇರಿ ಹಲವು ಮೆಡಿಕಲ್ ಸಹಾಯಕ್ಕೆ ಧಾವಿಸಿದ್ದಾರೆ. ಇಂಥ ಕೆಲಸ ಮಾಡುವುದು 100 ಕೋಟಿ ಬಜೆಟ್​ನ ಸಿನಿಮಾದಲ್ಲಿ ನಟಿಸುವುದಕ್ಕಿಂತ ಮೇಲು ಎಂದಿದ್ದಾರೆ.

    ಇದನ್ನೂ ಓದಿ: ಕರೊನಾ ನಡುವೆಯೂ ಚಿತ್ರೀಕರಣ ಮುಂದುವರೆಸಿದ ರಜನಿಕಾಂತ್​

    ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಮಧ್ಯರಾತ್ರಿಯಲ್ಲಿ ಸಾಕಷ್ಟು ಕರೆಗಳನ್ನು ಮಾಡಿದ ನಂತರ ಅವಶ್ಯವಿರುವವರಿಗೆ ಬೆಡ್ ವ್ಯವಸ್ಥೆ, ಆಕ್ಸಿಜನ್ ಒದಗಿಸಿ ಜೀವ ಉಳಿಸುವುದು 100 ಕೋಟಿ ರೂ ವೆಚ್ಚದ ಬಜೆಟ್​ನ ಚಿತ್ರದಲ್ಲಿ ಅಭಿನಯಿಸುವುದಕ್ಕಿಂತಲೂ ಸಾವಿರ ಪಟ್ಟು ಹೆಚ್ಚು ತೃಪ್ತಿ ನೀಡುತ್ತದೆ. ಆಸ್ಪತ್ರೆಗಳ ಮುಂದೆ ಬೆಡ್​ಗಾಗಿ ಸೋಮಕಿತರು ಕ್ಯೂನಲ್ಲಿ ನಿಂತಿರುವದನ್ನು ನೋಡಿದರೆ ನಮಗೆ ನಿದ್ದೆ ಬರುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಹೀಗೆ ನಿತ್ಯ ಸಾಕಷ್ಟು ಜನ ಕರೆ ಮಾಡಿ ಬೆಡ್​ಮತ್ತು ಆಕ್ಸಿಜನ್​ ಬೇಡಿಕೆ ಇಡುತ್ತಿದ್ದು, ಕೈಲಾದ ಮಟ್ಟಿಗೆ ತಮ್ಮ ಫೌಂಡೇಷನ್​ನಿಂದ ಈಡೇರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts