ಕನ್ನಡತಿ ರಚಿಕಾ ಸುರೇಶ್​ ಮುಡಿಗೇರಿದ ಮಿಸ್ ಇಂಡಿಯಾ ಟೀನ್ 2023 ಕಿರೀಟ

ASP_4248
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕನ್ನಡದ ನಟಿ, ಮಾಡೆಲ್ ರಚಿಕಾ ಸುರೇಶ್ ಮಿಸ್ ಇಂಡಿಯಾ ಟೀನ್ - 2023 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮೂಲತಃ ಶ್ರವಣಬೆಳಗೊಳಗದ ರೈತ ಕುಟುಂಬದ ರಚಿಕಾ, ಕೆಲ ವರ್ಷಗಳಿಂದ ಮಾಡೆಲಿಂಗ್ ಮಾಡಿಕೊಂಡಿದ್ದರು, ಇತ್ತೀಚೆಗಷ್ಟೆ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಡೆಬ್ಯೂ ಮಾಡಿದ್ದು, ಚೊಚ್ಚಲ ಚಿತ್ರದ ಶೀರ್ಷಿಕೆ ಇನ್ನಷ್ಟೇ ರಿವೀಲ್ ಆಗಬೇಕಿದೆ. ಅದರ ಜತೆಗೆ ತಮಿಳಿನ ‘ಎಂಜಾಯ್’ ಚಿತ್ರದಲ್ಲೂ ರಚಿಕಾ ನಟಿಸಿದ್ದಾರೆ.

ಇಂತಹ ರಚಿಕಾ, ಇತ್ತೀಚೆಗಷ್ಟೆ ದೆಹಲಿಯ ನೋಯ್ಡ ಫಿಲಂ ಸಿಟಿಯಲ್ಲಿ ನಡೆದ ಮಿಸ್ ಇಂಡಿಯಾ ಟೀನ್‌ನಲ್ಲಿ ಭಾಗವಹಿಸಿದ್ದರು. ವಿವಿಧ ರಾಜ್ಯಗಳ 20 ಸ್ಪರ್ಧಿಗಳು ಈ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪಾಶ್ಚಿಮಾತ್ಯ, ಸಾಂಪ್ರದಾಯಿಕ ಉಡುಗೆಗಳಲ್ಲಿ ಕ್ಯಾಟ್‌ವಾಕ್ ಮಾಡಿ ಎಲ್ಲರ ಗಮನ ಸೆಳೆದರು. ಪ್ರಶ್ನೋತ್ತರ ಸುತ್ತಿನಲ್ಲಿ ಜಡ್ಜ್‌ಗಳು ಕೇಳಿದ ಪ್ರಶ್ನೆಗೆ, ‘ಒಂದು ಬದಲಾವಣೆಯ ಅವಕಾಶ, ಅಧಿಕಾರ ಸಿಕ್ಕರೆ ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಕಾವೇರಿ ಸಮಸ್ಯೆಯನ್ನು ಸಾಮರಸ್ಯದೊಂದಿಗೆ ಬಗೆಹರಿಸುವುದಾಗಿ’ ಉತ್ತರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸದ್ಯ ಮಿಸ್ ಇಂಡಿಯಾ ಟೀನ್ ಕಿರೀಟ ಮುಡಿಗೇರಿಸಿಕೊಂಡು ವಾಪಸ್ಸಾಗಿರುವ 19 ವರ್ಷದ ರಚಿಕಾ ಸುರೇಶ್ ಸದ್ಯ ಸಿನಿಮಾಗಳತ್ತ ಗಮನ ಹರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net