More

    ಸೀತಾ ಪಾತ್ರದಲ್ಲಿ ಶೇ.10ರಷ್ಟು ಅಭಿನಯಿಸಿದರೂ ಸಂತೋಷವೇ: ಸಾಯಿಪಲ್ಲವಿ

    ಹೈದರಾಬಾದ್​: ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಸಾಯಿ ಪಲ್ಲವಿ ಸಿಕ್ಕ ಅವಕಾಶಕ್ಕಿಂತ ಮೆಚ್ಚಿದ ಪಾತ್ರಗಳಿಗಲ್ಲಿ ನಟಿಸುತ್ತ ಜನಮನ್ನಣೆ ಗಳಿಸಿದವರು. ಇತ್ತೀಚೆಗೆ ಕೆಲವು ಅವಕಾಶಗಳನ್ನು ತಿರಸ್ಕರಿಸಿ ಚಿತ್ರಗಳಲ್ಲಿ ನಟಿಸುವುದರಿಂದ ದೂರ ಉಳಿದಿದ್ದಾರೆ.
    ಆದರೆ ಈ ಪ್ರತಿಭಾವಂತ, ಸಹಜ ನಟಿಗೆ ಅದ್ಭುತ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಅದೂ ಸಹ ಪಾನ್​ ಇಂಡಿಯಾ ಮಟ್ಟದಲ್ಲಿ ಬೃಹತ್​ ಬಜೆಟ್​ನಲ್ಲಿ ತಯಾರಾಗಲಿರುವ “ರಾಮಾಯಣ” ದಲ್ಲಿ ನಟಿಸುವ ಅವಕಾಶ ಒದಗಿ ಬಂದಿರುವುದು ಆಕೆಯ ಅದೃಷ್ಟವೆಂದೇ ಹೇಳಬಹುದು.

    ಇದನ್ನೂ ಓದಿ: ಜೀವವೊಂದರ ಹೃದಯ ಬಡಿತ ನಿಲ್ಲಿಸಲು ಸಾಧ್ಯವಿಲ್ಲ: 26 ವಾರದ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂ

    ನಿತೀಶ್​ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತಾ ದೇವಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಬಗ್ಗೆ ಸಾಕಾಷ್ಟು ಪ್ರಚಾರ ನಡೆದಿದ್ದು, ನಿತೀಷ್​ ತಿಯಾರಿ ನನ್ನನ್ನು ಸೀತಾಮಾತೆಯ ಪಾತ್ರಕ್ಕೆ ಹೇಗೆ ಆರಿಸಿದರೋ ತಿಳಿಯದು. ಆದರೆ ಇದು ಬಹಳ ಸಂತೋಷಕರ ಸಂಗತಿ ಎಂದಿದ್ದಾರೆ.

    ಇದು ನಿಜಕ್ಕೂ ನನ್ನ ಪಾಲಿನ ಅದೃಷ್ಟವೇ ಸರಿ. ಈ ಚಿತ್ರದ ಚಿತ್ರೀಕರಣಕ್ಕೆ ಯಾವಾಗ ಕರೆ ಬರುತ್ತದೆಯೋ ಎಂದು ಅತ್ಯಾಸಕ್ತಿಯಿಂದ ಎದುರು ನೋಡುತ್ತಿದ್ದೇನೆ. ಇದು ಖಂಡಿತ ನನಗೆ ಸವಾಲಿನ ಪಾತ್ರ. ಅದೆಷ್ಟೋ ಮಂದಿ ಪ್ರತಿಭಾವಂತ ನಟಿಯರು ನಿರ್ವಹಿಸಿದ ಪಾತ್ರವದು. ಅವರು ನಟಿಸಿರುವುದರಲ್ಲಿ ಶೇ.10ರಷ್ಟು ಅಭಿನಯ ಮಾಡಲು ನನ್ನಿಂದ ಸಾಧ್ಯವಾದರೆ ಅಷ್ಟೇ ಸಾಕು. ಈ ಚಿತ್ರಕತೆ ಕೇಳಲು ಶೀಘ್ರದಲ್ಲೇ ಮುಂಬೈಗೆ ಹೋಗುತ್ತಿದ್ದೇನೆ ಎಂದರು.

    ಇನ್ನು ಭಾರತೀಯ ಚಿತ್ರರಂಗದಲ್ಲಿ ಹಲವು ರಾಮಾಯಣಗಳ ಕಥೆಗಳು ಚಿತ್ರಗಳಾಗಿವೆ. ಇ್ಲಿತನಕ ವಾಲ್ಮೀಕಿ ರಾಮಾಯಣವನ್ನು ಯಾರೂ ಸಹ ಸಂಪೂರ್ಣವಾಗಿ ತೆರೆಗೆ ತರಲಿಲ್ಲ. ಈ ಕೊರತೆಯನ್ನು ನಮ್ಮ ರಾಮಾಯಣ ತೀರಿಸುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಈ ರಾಮಾಯಣ ಚಿತ್ರವು ಮೂರು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

    Priya Varrier Photos: ಮೈಮಾಟ ಪ್ರದರ್ಶಿಸಿದ ‘ಕಣ್ಸನ್ನೆ ಹುಡುಗಿ’…ಸೀರೆಯಲ್ಲಿ ಪ್ರಿಯಾ ಬೆಡಗು ಬಿನ್ನಾಣ.. ಫೋಟೋ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts