ಭಾರತೀಯ ಸಿನಿಮಾ ಎಂದರೆ ನಾಲ್ಕು ಕುಟುಂಬಗಳಿಗಷ್ಟೇ ಸಂಬಂಧಿಸಿದ್ದಲ್ಲ ...

Kangana - Jallikattu - Final
Published on

ಮುಂಬೈ: ಸಮಯ ಸಿಕ್ಕಾಗಲೆಲ್ಲಾ ಬಾಲಿವುಡ್​ನ ಒಂದಿಷ್ಟು ಮಂದಿಯ ಕಾಲೆಳೆಯುವುದರಲ್ಲಿ ಕಂಗನಾ ರಣಾವತ್​ ಬಹಳ ಫೇಮಸ್ಸು. ಅದರಲ್ಲೂ ಚಿತ್ರರಂಗಕ್ಕೆ ಹೊಸಬರು, ಹೊರಗಿನಿಂದ ಬಂದವರು ಏನಾದರೂ ಸಾಧನೆ ಮಾಡಿದರೆ, ಕಂಗನಾಗೆ ವಿಶೇಷ ಪ್ರೀತಿ. ಅವರನ್ನು ಹೊಗಳುವುದರ ಜತೆಗೆ ಒಂದಿಷ್ಟು ಜನರ ಕಾಲೆಳೆಯುವುದನ್ನು ಕಂಗನಾ ಕಾಲದಿಂದ ಕಾಲಕ್ಕೆ ಮಾಡಿಕೊಂಡೇ ಬಂದಿದ್ದಾರೆ.

ಈಗ್ಯಾಕೆ ಈ ಮಾತು ಎಂದರೆ, ಕಂಗನಾ ಮತ್ತೊಮ್ಮೆ ಜೋಹರ್​ ಮತ್ತು ಚೋಪ್ರಾಗಳ ಕಾಲೆಳೆದಿದ್ದಾರೆ. ಈ ಬಾರಿ ಅವರು ಯಾರ ಹೆಸರನ್ನು ಪ್ರಸ್ತಾಪಿಸದಿದ್ದರೂ, ಬಾಲಿವುಡ್​ನ ದೊಡ್ಡ ಕುಟುಂಬದವರ, ಅವರಿಂಗ ಉಪಕೃತರಾದವರ ಕಾಲನ್ನು ಪರೋಕ್ಷವಾಗಿ ಎಳೆದಿದ್ದಾರೆ.

ಅದಕ್ಕೆ ಕಾರಣವಾಗಿದ್ದು, ಮಲಯಾಳಂನ 'ಜಲ್ಲಿಕಟ್ಟು' ಚಿತ್ರ. ಈ ಚಿತ್ರ ಇದೀಗ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದು ಈಗಾಗಲೇ ಸುದ್ದಿಯಾಗಿದೆ. ಈಗ ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಂಗನಾ ಕೆಲವರ ಕಾಲೆಳೆದಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಬುಲ್ಲಿವುಡ್​ನ ಗ್ಯಾಂಗ್​ಗಳಿಗೆ ಜನ ಮಂಗಳಾರತಿ ಎತ್ತಿದ್ದು ಕೊನೆಗೂ ಒಂದಿಷ್ಟು ಫಲ ಕೊಡುತ್ತಿದೆ. ಭಾರತೀಯ ಸಿನಿಮಾಗಳೆಂದರೆ ಕೇವಲ ನಾಲ್ಕು ಕುಟುಂಬಗಳಿಗೆ ಸಂಬಂಧಿಸಿದ್ದಲ್ಲ. ಮೂವಿ ಮಾಫಿಯಾದವರು ಮನೆಯಲ್ಲಿ ಅಡಗಿ ಕುಳಿತು, ಆಯ್ಕೆ ಸಮಿತಿಯ ಸದಸ್ಯರಿಗೆ ಕೆಲಸ ಮಾಡುವುದಕ್ಕೆ ಬಿಟ್ಟಿರುವುದು ಬಹಳ ಸಂತೋಷದ ವಿಷಯ. 'ಜಲ್ಲಿಕಟ್ಟು' ತಂಡದವರಿಗೆ ಶುಭಾಶಯಗಳು' ಎಂದು ಅವರು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net