ನನಗೆ ಸಿಕ್ಕಿದ್ದೇನು?: ನಟಿ ಕಂಗನಾ ರಣಾವತ್ ಪ್ರಶ್ನೆ

Kangana
Published on

ಕಂಗನಾ ಯಾವಾಗಲೂ ಬೇರೆ ನಟಿಯರ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ. ಅದರಲ್ಲೂ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮುಂತಾದವರ ವಿರುದ್ಧ ಮಾತಾಡುತ್ತಲೇ ಇರುತ್ತಾರೆ. ಅವರೆಲ್ಲ ಕಂಗನಾಗೆ ಏನು ಮಾಡಿದ್ದರು ಎಂಬ ಪ್ರಶ್ನೆ ಬರಬಹುದು. ಈಗ ಈ ವಿಷಯವಾಗಿ ಸ್ವತಃ ಕಂಗನಾ ಮಾತನಾಡಿದ್ದಾರೆ. ಕಂಗನಾ ಹೇಳುವಂತೆ, ಹಿಂದೊಮ್ಮೆ ಬಾಲಿವುಡ್​ನ ಎಲ್ಲ ನಟಿಯರ ಬಗ್ಗೆಯೂ ಅವರು ಒಳ್ಳೆಯ ಮಾತಾಡುವುದರ ಜತೆಗೆ, ಅವರೆಲ್ಲ ಚಿತ್ರಗಳ ಪ್ರಚಾರ ಮಾಡಿದ್ದರಂತೆ. ಅದಕ್ಕೆ ಬದಲಿಯಾಗಿ ತಮಗೆ ಸಿಕ್ಕಿದ್ದೇನು ಎಂಬುದು ಕಂಗನಾ ಪ್ರಶ್ನೆ? ‘ಅವರು ತಮ್ಮ ಚಿತ್ರದ ಪ್ರಿವ್ಯೂಗಳಿಗೆ ಕರೆಯುತ್ತಿದ್ದರು. ಹೂಗುಚ್ಛಗಳನ್ನು ನೀಡಿ ನನ್ನನ್ನು ಮುದ್ದಿಸುತ್ತಿದ್ದರು. ಅದೇ ನಾನು ಅವರು ಕರೆಯಬೇಕು ಎಂದಾಗ, ಒಬ್ಬರೂ ಫೋನ್ ಎತ್ತುತ್ತಿರಲಿಲ್ಲ. ನನ್ನ ಚಿತ್ರದ ಪ್ರೀವ್ಯೂಗಳಿಗೆ ಒಬ್ಬರೂ ಬರುತ್ತಿಲ್ಲ. ಎಲ್ಲರೂ ಚೆನ್ನಾಗಿಯೇ ಇದ್ದರು. ಯಾಕೋ ಗೊತ್ತಿಲ್ಲ. ಅವರೆಲ್ಲರೂ ನನ್ನ ವಿರುದ್ಧ ತಿರುಗಿಬಿದ್ದರು. ನನ್ನ ವಿರುದ್ಧವೇ ಷಡ್ಯಂತ್ರ ರಚಿಸಿದರು. ನಾನು ಒಬ್ಬಂಟಿಯಾಗುವಂತೆ ಮಾಡಿದರು. ಹಾಗಾಗಿ, ನಾನು ಸಹ ತಿರುಗಿಬಿದ್ದಿದ್ದೇನೆ. ಸಮಯ ಸಿಕ್ಕಾಗಲೆಲ್ಲ ಝಾಡಿಸುತ್ತಿರುತ್ತೇನೆ. ಅದಕ್ಕಷ್ಟೇ ಅವರು ಅರ್ಹರು’ ಎಂದು ಕಂಗನಾ ಹೇಳಿಕೊಂಡಿದ್ದಾರೆ.-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net