

ಚೆನ್ನೈ: ಅಮೆರಿಕಕ್ಕೆ ತೆರಳಿದ್ದ ನಟ ಕಮಲಹಾಸನ್ ಕೋವಿಡ್-19 ಸೋಂಕಿಗೆ ಒಳಗಾಗಿದ್ದು ಭಾರತಕ್ಕೆ ಮರಳಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದಿಂದ ವಾಪಸ್ ಬಂದಿರುವ ಅವರಲ್ಲಿ ಕರೊನಾ ಸೋಂಕಿರುವುದು ಖಚಿತಗೊಂಡಿದೆ.
ವಿದೇಶದಿಂದ ಮರಳಿದ ಬಳಿಕ ಸ್ವಲ್ಪ ಕೆಮ್ಮು ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೆ ಒಳಗಾದ ಅವರ ವರದಿಯಲ್ಲಿ ಕೋವಿಡ್-19 ಪಾಸಿಟಿವ್ ಎಂಬುದಾಗಿ ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅವರು ಐಸೋಲೇಷನ್ನಲ್ಲಿದ್ದಾರೆ. ಅಲ್ಲದೆ ತಮ್ಮ ಅಭಿಮಾನಿಗಳಿಗೂ ಕೋವಿಡ್ ಕುರಿತಾಗಿ ಕಿವಿಮಾತನ್ನು ಹೇಳಿದ್ದಾರೆ.
ಅಮೆರಿಕದಿಂದ ಮರಳಿದ ಬಳಿಕ ಕೆಮ್ಮಿತ್ತು, ಪರೀಕ್ಷೆ ಮಾಡಿಸಿಕೊಂಡಾಗ ಕರೊನಾ ಸೋಂಕಿರುವುದು ಖಚಿತಪಟ್ಟಿದೆ. ಕರೊನಾ ಸಾಂಕ್ರಾಮಿಕ ಪಿಡುಗು ಇನ್ನೂ ಮುಗಿದಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಿ, ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಟ್ವೀಟ್ ಮಾಡುವ ಮೂಲಕ ಅವರು ಸಲಹೆಯನ್ನೂ ನೀಡಿದ್ದಾರೆ.
ಅವರ ಟ್ವೀಟ್ಗೆ ಅಭಿಮಾನಿಗಳು, ಬೆಂಬಲಿಗರು ದೊಡ್ಡಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದು, ತಮ್ಮ ನೆಚ್ಚಿನ ನಟ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.