ನನ್ನ ಮನೆಯನ್ನೇ ಕರೊನಾ ಚಿಕಿತ್ಸೆಗೆ ಬಳಸಿಕೊಳ್ಳಿ ಎಂದ ಕಮಲ್ ಹಾಸನ್!

Kamal
Published on

ಚೆನ್ನೈ: ತಮಿಳುನಾಡಿನಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲಿನ ಸರ್ಕಾರವೂ ಕರೊನಾ ಹರಡುವಿಕೆ ತಡೆಗಟ್ಟಲು ಪಣತೊಟ್ಟಿದೆ.

ಸಿನಿಮಾ ತಾರೆಯರೂ ದೇಣಿಗೆ ರೂಪದಲ್ಲಿ ಹಣ ನೀಡುತ್ತಿದ್ದಾರೆ. ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಹಿರಿಯ ನಟ ಕಮಲ್ ಹಾಸನ್ ತಮ್ಮ ಮನೆಯನ್ನೇ ಆಸ್ಪತ್ರೆಯನ್ನಾಗಿಸಿಕೊಂಡು ಕರೊನಾ ರೊಗಿಗಳ ಚಿಕಿತ್ಸೆ ಬಳಸಿಕೊಳ್ಳಬಹುದೆಂದು ಹೇಳಿದ್ದಾರೆ. ಮಕ್ಕಳ್ ನಿಧಿ ಮಯಂ ಪಕ್ಷದ ಮುಖ್ಯಸ್ಥರಾಗಿರುವ ಕಮಲ್ ಈ ಬೇಡಿಕೆಯನ್ನು ಅಲ್ಲಿನ ಸರ್ಕಾರದ ಮುಂದಿಟ್ಟಿದ್ದು, ತಾತ್ಕಾಲಿಕವಾಗಿ ಆಸ್ಪತ್ರೆಯನ್ನಾಗಿಸಿಕೊಳ್ಳಿ ಎಂದಿದ್ದಾರೆ.

ಅಂದಹಾಗೆ, ಕಮಲ್ ಹಾಸನ್ ಪತ್ನಿ ಸಾರಿಕಾ ಮತ್ತು ಶ್ರುತಿ ಮುಂಬೈನ ನಿವಾಸದಲ್ಲಿದ್ದರೆ, ಕಮಲ್ ಮತ್ತು ಕಿರಿಮಗಳು ಅಕ್ಷರಾ ಚೆನ್ನೈ ನಿವಾಸದಲ್ಲಿದ್ದಾರೆ. ಇನ್ನೊಂದು ಭವ್ಯಬಂಗಲೆಯನ್ನು ಕರೊನಾ ಪೀಡಿತರ ಚಿಕಿತ್ಸೆ ಬಳಸಿಕೊಳ್ಳಿ ಎಂದಿದ್ದು, ಅಭಿಮಾನಿ ವಲಯದಲ್ಲೂ ಕಮಲ್ ಅವರ ಈ ವಿಚಾರ ಭಾರೀ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಇದಷ್ಟೇ ಅಲ್ಲದೆ ಸಿನಿಮಾ ಕಾರ್ಮಿಕರಿಗೂ ಸ್ಪಂದಿಸಿರುವ ಅವರು, 10 ಲಕ್ಷ ದೇಣಿಗೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net