'ಆಚಾರ್ಯ'ಗಾಗಿ ಹನಿಮೂನ್​ ಮುಗಿಸಿ ವಾಪಸ್ಸಾದ ಕಾಜಲ್​ ಅಗರ್​ವಾಲ್​

Kajal Agarwal - Final
Published on

ಮುಂಬೈ: ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರದ ಚಿತ್ರೀಕರಣ ಸ್ವಲ್ಪ ಮುಂದಕ್ಕೆ ಹೋಗಿದೆ ಎಂಬ ಸುದ್ದಿಯಾದಾಗ, ಬಹುಶಃ ಎಲ್ಲರಿಗಿಂಥ ಹೆಚ್ಚು ಖುಷಿಪಟ್ಟವರು ನಟಿ ಕಾಜಲ್​ ಅಗರ್​ವಾಲ್​ ಇರಬೇಕು.

ಏಕೆಂದರೆ, ಈ ಚಿತ್ರದಲ್ಲಿ ಕಾಜಲ್​, ಚಿರಂಜೀವಿಗೆ ನಾಯಕಿಯಾಗಿ ನಟಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ವಾಪಸ್ಸಾಗಬೇಕಿತ್ತು. ಅಷ್ಟರಲ್ಲಿ ಚಿರಂಜೀವಿಗೆ ಕರೊನಾ ಪಾಸಿಟಿವ್​ ಎಂಬ ಸುದ್ದಿಯಾಗಿ, ಚಿತ್ರೀಕರಣ ಮುಂದಕ್ಕೆ ಹಾಕಲಾಯಿತು.

ಇದೀಗ ಚಿರಂಜೀವಿ ಅವರಿಗೆ ಕರೊನಾ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಚಿತ್ರೀಕರಣ ಡಿಸೆಂಬರ್​ 5ರಂದು ಪ್ರಾರಂಭವಾಗಲಿದ್ದು, ಅದರಲ್ಲಿ ಭಾಗವಹಿಸುವುದಕ್ಕೆ ಕಾಜಲ್​, ಹನಿಮೂನ್​ ಮುಗಿಸಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

ಇತ್ತೀಚೆಗೆ ಹನಿಮೂನ್​ ಮುಗಿಸಿ ಮುಂಬೈಗೆ ವಾಪಸ್ಸಾಗಿರುವ ಕಾಜಲ್​ ಮತ್ತು ಗೌತಮ್​ ಕಿಚ್ಲು, ತಮ್ಮ ಕುಟುಂಬದವರ ಜತೆಗೆ ಭಾಜ್​ಧೂಜ್​ ಎಂಬ ಹಬ್ಬವನ್ನೂ ಆಚರಿಸಿದ್ದಾರೆ. ಅಷ್ಟೇ ಅಲ್ಲ, ಸಂಬಂಧಿಕರ ಮನೆಗೆ ಹೋಗಿ ದೀಪಾವಳಿಯ ಶುಭಾಶಯಗಳನ್ನು ಹೇಳಿ ಬಂದಿದ್ದಾರೆ.

ಹಬ್ಬದ ಮೂಡ್​ನಲ್ಲಿರುವ ಕಾಜಲ್​, ಸದ್ಯದಲ್ಲೇ ತಮ್ಮ ಚಿತ್ರರಂಗದ ಸ್ನೇಹಿತರಿಗಾಗಿ ಹೈದರಾಬಾದ್​ ಮತ್ತು ಚೆನ್ನೈನಲ್ಲಿ ಆರತಕ್ಷತೆ ಸಮಾರಂಭವನ್ನು ಇಟ್ಟುಕೊಂಡಿದ್ದು, ಅದನ್ನು ಮುಗಿಸಿ, 'ಆಚಾರ್ಯ' ಚಿತ್ರದ ಚಿತ್ರೀಕರಣದಲ್ಲಿ ಕಾಜಲ್​ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net