ಹುಡುಕಿಕೊಟ್ಟವರಿಗೆ ಬಹುಮಾನ; ರಿಲೀಸ್‌ಗೆ ರೆಡಿಯಾಗಿದೆ ‘ಕಾಣೆಯಾಗಿದ್ದಾಳೆ’ ಸಿನಿಮಾ

kaneyagiddale
Published on

ಬೆಂಗಳೂರು:ರಾಜ್ ಕಾರ್ತಿಕ್ ಆ್ಯಕ್ಷನ್-ಕಟ್ ಹೇಳಿರುವ ವಿನಯ್ ಕಾರ್ತಿ, ಕೀರ್ತಿ ಭಟ್ ಮತ್ತು ಹರ್ಷಿತಾ ಕಲಿಂಗಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಕಾಣೆಯಾಗಿದ್ದಾಳೆ’. ಚಿತ್ರಕ್ಕೆ ‘ಹುಡುಕಿ ಕೊಟ್ಟವರಿಗೆ ಬಹುಮಾನ’ ಎಂಬ ಅಡಿಬರಹವಿದೆ.

ಇದು ನೈಜ ಘಟನೆಗೆ ಕಾಲ್ಪನಿಗೆ ಸ್ಪರ್ಶ ನೀಡಿರುವ ಕಥೆಯಾಗಿದ್ದು, ಥ್ರಿಲ್ಲರ್ ಅಂಶಗಳೂ ಸೇರಿವೆ. ‘ಸಾಮಾಜಿಕ ಜಾಲತಾಣಗಳನ್ನು ಹೆಣ್ಣುಮಕ್ಕಳು ಜಾಗರೂಕತೆಯಿಂದ ಬಳಸಬೇಕು. ಇಲ್ಲದಿದ್ದರೆ ಅಪಾಯ ಖಂಡಿತ ಎಂಬ ವಿಷಯವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಿರ್ದೇಶಕ ರಾಜ್ ಕಾರ್ತಿಕ್. ರಾಜ್ಯಾದ್ಯಂತ 30ಕ್ಕೂ ಅಧಿಕ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ಕಾಣೆಯಾಗಿದ್ದಾಳೆ’ ಚಿತ್ರವನ್ನು ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು. ನಾಯಕ ವಿನಯ್, ‘ಇದು ನನ್ನ ಮೊದಲ ಸಿನಿಮಾ. ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಿದ್ದೇನೆ. ತಾಯಿ-ಮಗನ ಬಾಂಧವ್ಯದ ಸನ್ನಿವೇಶಗಳು ಚಿತ್ರದ ಹೈಲೈಟ್‌ಗಳಲ್ಲೊಂದು’ ಎನ್ನುತ್ತಾರೆ.

ನಾಯಕಿ ಕೀರ್ತಿ ಭಟ್, ‘ಹಳ್ಳಿಯಿಂದ ಜೀವನ ಕಟ್ಟಿಕೊಳ್ಳಲು ನಗರಕ್ಕೆ ಬರುವ ಹುಡುಗಿ ಹೇಗೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾಳೆ ಎಂಬುದನ್ನು ನನ್ನ ಪಾತ್ರದ ಮೂಲಕ ಹೇಳಲಾಗಿದೆ’ ಎಂದು ಹೇಳಿಕೊಂಡರು. ಹರ್ಷಿತಾ ಕಲಿಂಗಲ್ ಮತ್ತೊಬ್ಬ ನಾಯಕಿಯಾಗಿದ್ದು, ನಾಯಕನ ತಾಯಿಯ ಪಾತ್ರದಲ್ಲಿ ಗಿರಿಜಾ ಲೋಕೇಶ್ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net