ಮೇಘಾ ರಿಟರ್ನ್ಸ್: ಕುಟುಂಬದಲ್ಲಿ ಮನಸ್ತಾಪ ಇದ್ದೇ ಇರುತ್ತದೆ..

Megah Shetty
Published on

‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ನಾಯಕಿ ಮೇಘಾ ಶೆಟ್ಟಿ ಕಾರಣಾಂತರಗಳಿಂದ ಹೊರನಡೆದಿದ್ದಾರೆ ಎಂಬ ವಿಚಾರ ಕಳೆದ ವಾರವಷ್ಟೇ ಸುದ್ದಿಯಾಗಿತ್ತು. ಮುಂದುವರಿದು ಬೇರೆ ನಾಯಕಿಯನ್ನೂ ಧಾರಾವಾಹಿ ತಂಡ ಆಯ್ಕೆ ಮಾಡಿಕೊಂಡಿತ್ತು. ಹೀಗಿರುವಾಗಲೇ ಮೇಘಾ ಔಟ್ ಎಂಬ ಸುದ್ದಿಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ, ಧಾರಾವಾಹಿಯಲ್ಲಿ ಮೇಘಾ ಎಂದಿನಂತೆ ಮುಂದುವರಿಯಲಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಮೇಘಾ, ‘ಕುಟುಂಬ ಅಂದರೆ ಸಣ್ಣ ಪುಟ್ಟ ಮನಸ್ತಾಪ ಇದ್ದೇ ಇರುತ್ತದೆ. ಅದೇ ರೀತಿ ನನ್ನ ಧಾರಾವಾಹಿ ಕುಟುಂಬದಲ್ಲೂ ಗೊಂದಲಗಳಾಗಿದ್ದವು. ಪದೇಪದೆ ಡೇಟ್ ಕ್ಲಾಷ್ ಆಗುತ್ತಿತ್ತು. ಸರಿಯಾಗಿ ನಿರ್ವಹಣೆ ಮಾಡಲು ಆಗುತ್ತಿರಲಿಲ್ಲ. ಇದೀಗ ಅದೆಲ್ಲವೂ ಸರಿಯಾಗಿದೆ. ಇನ್ನು ಮುಂದೆ ‘ಜೊತೆ ಜೊತೆಯಲಿ’ ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರ ನಾನೇ ನಿಭಾಯಿಸುತ್ತೇನೆ’ ಎಂದಿದ್ದಾರೆ.

ಮೇಘಾ ಆಗಮನದ ಬಗ್ಗೆ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಸಹ ಮಾತನಾಡಿದ್ದಾರೆ. ‘ಗೊಂದಲಗಳು ಬಗೆಹರಿದಿವೆ. ಅನು ಸಿರಿಮನೆ ಪಾತ್ರದ ಬಗ್ಗೆ ಮೇಘಾಗೆ ತುಂಬ ಪ್ರೀತಿ. ಅದನ್ನೇ ಮಾಡಬೇಕೆಂಬ ಆಸೆ ಅವರಲ್ಲಿದೆ. ಹಾಗಾಗಿ, ಎಂದಿನಂತೆ ನಾಯಕಿ ಯಾಗಿ ಅವರೇ ಮುಂದುವರಿಯುತ್ತಾರೆ’ ಎಂದಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸುತ್ತಲೇ ನಟ ಗಣೇಶ್ ಜತೆಗೆ ‘ತ್ರಿಬಲ್ ರೈಡಿಂಗ್’ ಸಿನಿಮಾ ಕೆಲಸಗಳನ್ನು ಮೇಘಾ ಶೆಟ್ಟಿ ಮುಗಿಸಿದ್ದಾರೆ. ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದಲ್ಲಿಯೂ ಅವರು ನಟಿಸಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net