ನಾಲ್ಕು ಚಿತ್ರೋತ್ಸವಗಳಿಗೆ 'ಜೀವ್ನಾನೇ ನಾಟ್ಕ ಸಾಮಿ' ಆಯ್ಕೆ

Jeevanane Nataka Swamy - Final
Published on

ಬೆಂಗಳೂರು: 'ಜೀವ್ನಾನೇ ನಾಟ್ಕ ಸಾಮಿ' ಎಂಬ ಚಿತ್ರವು ತನ್ನ ವಿಭಿನ್ನ ಶೀರ್ಷಿಕೆಯಿಂದ ಈಗಾಗಲೇ ಹಲವರ ಗಮನಸೆಳೆದಿದೆ. ರಾಜು ಭಂಡಾರಿ ರಾಜಾವರ್ತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಇದೀಗ ನಾಲ್ಕು ಆನ್​ಲೈನ್​ ಚಿತ್ರೋತ್ಸವಗಳಿಗೆ ಆಯ್ಕೆಯಾಗಿವೆ.

ಪ್ರಮುಖವಾಗಿ ಕೋಲ್ಕತ್ತಾದಲ್ಲಿ ನಡೆದ ಕಲ್ಟ್​ ಕ್ರಿಟಿಕ್​ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವುದರ ಜೊತೆಗೆ ಔಟ್​ಸ್ಟಾಂಡಿಂಗ್​ ಅಚೀವ್​ಮೆಂಟ್​ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕೋಲ್ಕತ್ತಾದಲ್ಲೇ ನಡೆದ ರಬೀಂದ್ರನಾಥ್​ ಟ್ಯಾಗೋರ್​ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಔಟ್​ಸ್ಟಾಂಡಿಂಗ್​ ಅಚೀವ್​ಮೆಂಟ್​ ಪ್ರಶಸ್ತಿ ಪಡೆದಿದೆ. ಇನ್ನು ಲಂಡನ್​ನಲ್ಲಿ ನಡೆದ ಲಿಫ್ಟ್​ ಆಫ್​ ಆನ್​ಲೈನ್​ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಂತಿಮ ಹಂತದವರೆಗೂ ಹೋದರೆ, ಅಮೇರಿಕಾದ ಮಿಯಾಮಿ ಅಂತಾರಾಷ್ಟ್ರೀಯ ಆನ್​ಲೈನ್​ ಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡಿದೆ.

'ಜೀವ್ನಾನೇ ನಾಟ್ಕ ಸಾಮಿ' ಚಿತ್ರದ ವಿಶೇಷತೆಯೆಂದರೆ, ಕಿರುತೆರೆಯ ಇಬ್ಬರು ಜನಪ್ರಿಯ ಪ್ರತಿಭೆಗಳು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುವ 'ಕನ್ನಡತಿ' ಧಾರಾವಾಹಿಯ ಕಿರಣ್​ ರಾಜ್​ ಮತ್ತು ಜೀ ಕನ್ನಡದ 'ಸರಿಗಮಪ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಶ್ರೀಹರ್ಷ, ಈ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಅವರ ಜೊತೆಗೆ ಪವಿತ್ರಾ ಕೋಟ್ಯಾನ್​, ಅನಿಕಾ ರಮ್ಯಾ, ದೇವ್​ ಮುಂತಾದವರು ಅಭಿನಯಿಸಿರುವ ಈ ಚಿತ್ರವನ್ನು ರಾಜು ಭಂಡಾರಿ ರಾಜಾವರ್ತ ನಿರ್ದೇಶನ ಮಾಡಿದರೆ, ಅತೀಶಯ ವೇದಾಂತ ಜೈನ್​ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net