More

    ನಾಯಕ-ಖಳನಾಯಕರ ನಡುವಿನ ಖೇಲ್​ …

    ಬೆಂಗಳೂರು: ಕನಸು ಕಾಣುವುದು ಸಹಜ. ಆದರೆ, ಅದನ್ನು ನನಸು ಮಾಡುವುದು ತುಂಬ ಕಷ್ಟ. ಮುಂದೊಂದು ದಿನ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕು ಎಂದು ಕನಸು ಕಂಡಿದ್ದ ಸತೀಶ್ ಇದೀಗ, ‘ಖೇಲ್​’ ಎಂಬ ಚಿತ್ರವನ್ನು ಸದ್ದಿಲ್ಲದೆ ನಿರ್ಮಿಸಿದ್ದಾರೆ. ಯೋಗಿತ ಫಿಲಂ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ಈ ಚಿತ್ರವನ್ನು ಅವರು ನಿರ್ಮಿಸಿದ್ದಾರೆ.

    ಇದನ್ನೂ ಓದಿ: ಆಹಾದಲ್ಲಿ ಬೆಲ್​ಬಾಟಂ; ಡಿ. 11ರಂದು ಬಿಡುಗಡೆ

    ನಟನಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ರಾಜೀವ್ ನಾಯ್ಕ್​ ಇದೀಗ ತಾವೇ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ‘ಖೇಲ್​’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ತಂಡದಲ್ಲಿ ಎಲ್ಲರೂ ಹೊಸಬರೇ ಇದ್ದು, ಮೊದಲ ಚಿತ್ರದಲ್ಲೇ ಒಂದು ಹೊಸ ಪ್ರಯತ್ನವನ್ನು ಮಾಡುವುದಕ್ಕೆ ಮುಂದಾಗಿದ್ದಾರೆ.

    ‘ಖೇಲ್​’ ಎಂದರೆ ಆಟ ಎಂದರ್ಥ. ನಾಯಕ ತನಗೆ ಅರಿವಿಲ್ಲದೆ ಒಂದು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾನೆ. ಅದರಿಂದ ಹೊರಬರಲು ಒದ್ದಾಡುವುದನ್ನು ಆಟದ ರೀತಿಯಲ್ಲಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಆಟದಲ್ಲಿ ನಾಯಕ, ಖಳಖನಾಯಕರಿಗೆ ಸಿಗುತ್ತಾನೋ ಇಲ್ಲವೋ ಎಂಬುದೇ ಪ್ರಶ್ನೆ.

    ಈ ಚಿತ್ರದ ಮೂಲಕ ಅರವಿಂದ್​ ಎನ್ನುವ ಹೊಸ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ನಾಯಕರಾಗಿ ನಟಿಸಿದ್ದಾರೆ. ಇನ್ನು ‘ಪ್ಯಾಟೆ ಹೈಕ್ಳು ಹಳ್ಳಿ ಲೈಫು’, ‘ಸುಬ್ಬಲಕ್ಷ್ಮೀ ಸಂಸಾರ’ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಹಿಮಾ ಮೋಹನ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ‘ಐರಾವತ’, ‘ಹೊಂಬಣ್ಣ’, ‘ಚಿ ತು ಸಂಘ’, ‘ಡೇಂಜರ್​ ಝೋನ್’ ಸೇರಿ 60ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಪೃಥ್ವಿ ಯಾದವ್ ಈ ಚಿತ್ರದಲ್ಲಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಡುಗಡೆಗೆ ಸನಿಹ ಬಂದ ‘ಅರ್ಜುನ್​ ಗೌಡ’; ರೀ- ರೆಕಾರ್ಡಿಂಗ್ ಮುಕ್ತಾಯ

    ‘ಖೇಲ್​’ ಚಿತ್ರವನ್ನು ಚಿಂತಾಮಣಿ, ಕೈವಾರ, ಕಗತಿ, ಕೋಲಾರ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಗಣೇಶ್ ಭಾಗವತ್ ಸಂಗೀತ, ದಿಲೀಪ್ ಪಿರಿಲಾ ಛಾಯಾಗ್ರಹಣ ಮಾಡಿರುವ ಈ ಚಿತ್ರದಲ್ಲಿ ಚಂದ್ರ ಯಾದವ್, ಗೌತಮ್ ರಾಜ್, ಪ್ರೆಸ್ ರವಿ, ಪವಿತ್ರ, ಸಂತೋಷ್, ರಾಜೇಶ್, ಮಹೇಶ್ ಮುಂತಾದವರು ನಟಿಸಿದ್ದಾರೆ.

    ಪ್ರಶಸ್ತಿ ಗಳಿಸುವುದು ಈ ಚಿತ್ರದ ಉದ್ದೇಶ ಅಲ್ಲ: ಶಕೀಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts