

ಬೆಂಗಳೂರು: 2019ರ ಸೂಪರ್ ಹಿಟ್ ಕನ್ನಡ ಸಿನಿಮಾ ‘ಬೆಲ್ಬಾಟಂ’ ಇದೀಗ ತೆಲುಗು ನಾಡಿನಲ್ಲಿ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ- ಹರಿಪ್ರಿಯಾ ಕಾಂಬಿನೇಷನ್ನ ಈ ಚಿತ್ರ ಕನ್ನಡದಲ್ಲಿ ಹಿಟ್ ಪಟ್ಟಿ ಸೇರುತ್ತಿದ್ದಂತೆ ತೆಲುಗಿನಿಂದ ರಿಮೇಕ್ಗೆ ಬೇಡಿಕೆ ಬಂದಿತ್ತು. ಅದರಂತೆ ಟಾಲಿವುಡ್ನ ಹಾಸ್ಯ ನಟ ಸುನೀಲ್ ರಿಮೇಕ್ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಖಚಿತವಾಯಿತು.
ಈ ನಡುವೆಯೇ ಕನ್ನಡದ ‘ಬೆಲ್ಬಾಟಂ’ ಟಾಲಿವುಡ್ನ ಖ್ಯಾತ ಚಿತ್ರ ನಿರ್ವಪಕ ಅಲ್ಲು ಅರವಿಂದ್ ಅವರ ‘ಆಹಾ’ ಓಟಿಟಿಯಲ್ಲಿ ಡಿ. 11ರಂದು ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಚಿತ್ರದ ತೆಲುಗು ರಿಮೇಕ್ ‘ಅನಗನಗಾ ಓ ಅತಿಥಿ’ ಸಿನಿಮಾ ‘ಆಹಾ’ ಓಟಿಟಿಯಲ್ಲಿ ಪ್ರಸಾರವಾಗಿತ್ತು.