ದಯವಿಟ್ಟು ಹೀಗೆ ಮಾಡಬೇಡಿ, ನೋಡಿದ್ರೆ ಸಾವೇ ಗತಿ ಅನಿಸುತ್ತೆ! ರಣದೀಪ್​ ಸ್ಥಿತಿ ತೆರೆದಿಟ್ಟ ನಟ ಜಯ್ ಪಟೇಲ್

WhatsApp Image 2024-04-13 at 10.17.11 AM
Published on

ಮುಂಬೈ: ಬಾಲಿವುಡ್​ ನಟ ರಣದೀಪ್​ ಹೂಡಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ವಿನಾಯಕ್ ದಾಮೋದರ್​ ಸಾರ್ವಕರ್​ ಅವರ ಜೀವನಗಾಥೆಯ 'ಸ್ವಾತಂತ್ರ್ಯ ವೀರ ಸಾರ್ವಕರ್' ಚಿತ್ರವು ನಿರೀಕ್ಷೆಗೆ ತಕ್ಕಂತೆ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆಯೊಂದಿಗೆ ಮಿಶ್ರ ಅಭಿಪ್ರಾಯಗಳನ್ನು ಗಳಿಸಿತು. ಸ್ವತಃ ರಣದೀಪ್ ಅವರೇ ನಿರ್ದೇಶಿಸಿ, ನಿರ್ಮಿಸಿ ಹಾಗೂ ನಟಿಸಿದ ಚಿತ್ರದ ಹಿಂದಿನ ಶ್ರಮದ ಬಗ್ಗೆ ಇಂಡೋ-ಅಮೇರಿಕನ್ ನಟ ಜೇ ಪಟೇಲ್, ನಟನ ಕುರಿತು ಎಲ್ಲಿಯೂ ಬಿಚ್ಚಿಡದ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಐತಿಹಾಸಿಕ 'ಸ್ವತಂತ್ರ ವೀರ್ ಸಾವರ್ಕರ್' ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ವಿದ್ವಾಂಸ ಶ್ಯಾಮ್‌ಜಿ ಕೃಷ್ಣ ವರ್ಮಾ ಪಾತ್ರದಲ್ಲಿ ಕಾಣಿಸಿಕೊಂಡ ಜೇ ಪಟೇಲ್​ ಅವರ ಚಿತ್ರವು ಮಾರ್ಚ್ 22, 2024ರಂದು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ 21 ಕೋಟಿ ರೂ.ಗೂ ಅಧಿಕ ಗಳಿಕೆ ದಾಟುವಲ್ಲಿ ಯಶಸ್ವಿಯಾಗಿದೆ. 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ," "ತೋರ್ಬಾಜ್," "ಮಿಲನ್ ಟಾಕೀಸ್,' ಮತ್ತು ಇಂಗ್ಲಿಷ್ ಕಿರುಚಿತ್ರ 'ಐಯಾಮ್ ಗೊನ್ನಾ ಟೆಲ್ ಗಾಡ್ ಎವೆರಿಥಿಂಗ್' ಸಿನಿಮಾಗಳಲ್ಲಿ ಜೇ ನಟಿಸಿದ್ದಾರೆ.

ಯಶಸ್ವಿ ಉದ್ಯಮಿಯಾಗಿ ಬದುಕು ಕಟ್ಟಿಕೊಂಡ ಜೇ ಪಟೇಲ್, ಈಗ ಬದ್ಧ ನಟನಾಗಿ, ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. 'ಸ್ವತಂತ್ರ ವೀರ್ ಸಾವರ್ಕರ್' ಚಿತ್ರದ ಬಗ್ಗೆ ಮಾತನಾಡುವಾಗ ಮಧ್ಯರಾತ್ರಿ ವೇಳೆ ನಡೆದ ಆ ಒಂದು ಘಟನೆಯನ್ನು ಪಟೇಲ್ ಮೆಲುಕು ಹಾಕಿದ್ದಾರೆ. ನ್ಯೂಯಾರ್ಕ್ ಸಿಟಿಯಲ್ಲಿ ಆಗ ರಾತ್ರಿ 2:30 ಸಮಯ ಆಗಿತ್ತು. ಇದ್ದಕ್ಕಿದ್ದಂತೆ ರಣದೀಪ್ ನನಗೆ ಕರೆ ಮಾಡಿದರು. ಹೇ, ನೀವು ಮೂಲ ಗುಜರಾತಿಯವರು ಅಲ್ವಾ? ಆದ್ದರಿಂದ ಶ್ಯಾಮ್ಜಿ ಕೃಷ್ಣ ವರ್ಮಾ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೇ? ಎಂದು ಕೇಳಿದ್ರು. ಅದಕ್ಕೆ ನಾನು ಶ್ಯಾಮ್‌ಜಿಯ ಬಗ್ಗೆ ಸಾಕಷ್ಟು ತಿಳಿದಿದ್ದೇನೆ ಮತ್ತು ನನ್ನ ಸ್ನೇಹಿತನ ಮನೆ ಶ್ಯಾಮ್‌ಜಿಯ ಮನೆಯಿಂದ ಕೇವಲ 500 ಅಡಿ ದೂರದಲ್ಲಿದೆ, ಹಾಗಾಗಿ ಚೆನ್ನಾಗಿಯೇ ತಿಳಿದುಕೊಂಡಿದ್ದೇನೆ ಎಂದು ಹೇಳಿದೆ.

ಏ ಟು ಜೆಡ್​ ಅವರ ಬಗ್ಗೆ ನನಗೆ ಗೊತ್ತಿದೆ ಎಂದಾಗ ರಣದೀಪ್ ಬಹಳ ಖುಷಿಪಟ್ಟರು. ಆಗ ರಾಮ್​ಜಿ ಪಾತ್ರವನ್ನು ನೀವೇ ಮಾಡಿ ಎಂದರು. ನಾನಿಲ್ಲ ಮಾಡೋದಿಲ್ಲ ಅಂತ ಹೇಳಿದೆ. ಆಗ ರಣದೀಪ್, ನಾನು ಹೇಳಿಕೊಡ್ತೀನಿ ನೀವು ಮಾಡಿ, ಪಾತ್ರದ ಬಗ್ಗೆ ಚೆನ್ನಾಗಿ ಗೊತ್ತಿದ್ದರೆ, ನಟಿಸುವುದು ಸುಲಭ ಎಂದರು. ಸರಿ ಎಂದು ಒಪ್ಪಿದ ನಾನು, ನನ್ನ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಇದು ದೊಡ್ಡ ಸವಾಲಾಗಿತ್ತು. ನಾನು ವಡಾ ಪಾವ್, ಗುಲಾಬ್ ಜಾಮೂನ್ ಎಲ್ಲಾ ತಿಂತಿದ್ದೆ. ಆದ್ರೆ, ರಣದೀಪ್ ಪಾಪ.

ರಣದೀಪ್ 32 ಕೆಜಿ ತೂಕ ಇಳಿಸಿಕೊಳ್ಳಬೇಕಿತ್ತು. ಹಾಗಾಗಿ ಅವನು ಏನೂ ತಿನ್ನುತ್ತಿರಲಿಲ್ಲ. ದಿನದಲ್ಲಿ 19 ಗಂಟೆಗಳ ಕಾಲ ಉಪಹಾಸ ಇರುತ್ತಿದ್ದ. ಆತ ಏನನ್ನೂ ಸೇವಿಸಬಾರದು ಎಂಬ ನಿಯಮವಿತ್ತು. ರಣದೀಪ್ ನೋಡಿದಾಗಲೆಲ್ಲ ನನಗೆ ಕಷ್ಟವಾಗ್ತಿತ್ತು. ಕೆಲವೊಮ್ಮೆ ದಯವಿಟ್ಟು ಕೈಮುಗಿಯುತ್ತೀನಿ, ನನ್ನ ಮುಂದೆ ಮಾತ್ರ ಈ ರೀತಿ ಮಾಡಬೇಡಿ. ನೀವು ತಿನ್ನೋದು ನೋಡಿದ್ರೆ, ಸಾಯ್ತೀನಿ ಅನಿಸುತ್ತೆ ಎಂದರು ಎಂದು ರಣದೀಪ್ ಜತೆಗಿನ ಅನುಭವವನ್ನು ಪಟೇಲ್ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net