More

    ಬಾಲ್ಯವಿವಾಹ ಧಿಕ್ಕರಿಸಿ, ಧೈರ್ಯದಿಂದ ಪರೀಕ್ಷೆ ಬರೆದ ಬಾಲಕಿ ಬೋರ್ಡ್ ಎಕ್ಸಾಂನಲ್ಲಿ ಟಾಪರ್​!

    ತಿರುಪತಿ: ಮನೆಯಲ್ಲಿ ಪೋಷಕರು ಬಾಲ್ಯವಿವಾಹಕ್ಕೆ ಮುಂದಾದರು ಎಂಬುದನ್ನು ಅರಿತ ಓರ್ವ ವಿದ್ಯಾರ್ಥಿನಿ ಇದನ್ನು ಧಿಕ್ಕರಿಸಿ, ಮದುವೆಯನ್ನು ತಪ್ಪಿಸಿ, ಧೈರ್ಯದಿಂದ ಮೊದಲ ವರ್ಷದ ಮಧ್ಯಂತರ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿ, ಎಕ್ಸಾಂ ಬರೆದಿದ್ದಳು. ಇದೀಗ ಅದರ ಫಲಿತಾಂಶ ಪಕಟವಾಗಿದ್ದು, ರಿಸಲ್ಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಇಡೀ ಊರಿನ ಜನತೆಗೆ ಭಾರೀ ಸಂತೋಷ ತಂದಿದೆ.

    ಇದನ್ನೂ ಓದಿ: ಒಲಿಂಪಿಕ್ಸ್​ ಕನಸು ಭಗ್ನಗೊಳಿಸಲು ಸಂಚು; ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ವಿನೇಶ್ ಪೋಗಟ್​​ ಆರೋಪ

    ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆದ್ದ ಹರಿವನಂ ಮೂಲದ ಎಸ್ ನಿರ್ಮಲಾ ಎಂಬ ಯುವತಿ, 440ಕ್ಕೆ 421 ಅಂಕಗಳನ್ನು (95.7%) ಪಡೆಯುವ ಮೂಲಕ ಇಂದು ಅನೇಕ ಬಾಲಕಿಯರಿಗೆ ಮಾದರಿಯಾಗಿದ್ದಾಳೆ. ಕಳೆದ ವರ್ಷ 10ನೇ ತರಗತಿ ಪರೀಕ್ಷೆಗಳಲ್ಲಿ 600ಕ್ಕೆ 537 (ಶೇ.89.5) ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್​ ಸ್ಥಾನ ಪಡೆದಿದ್ದಳು.

    ಪ್ರತಿಭಾವಂತ ವಿದ್ಯಾರ್ಥಿಯಾದ ನಿರ್ಮಲಾಳ ಪೋಷಕರು ಕಡು ಬಡವರು ಎಂದು ಹೇಳಲಾಗಿದೆ. ಆಕೆಯ ಪೋಷಕರು ಈಗಾಗಲೇ ತಮ್ಮ ಇತರ ಮೂವರು ಹೆಣ್ಣುಮಕ್ಕಳನ್ನು ಮೊದಲೇ ಮದುವೆ ಮಾಡಿಕೊಟ್ಟಿದ್ದರು. ನಾಲ್ವರಲ್ಲಿ ಕಿರಿಯವಳಾದ ನಿರ್ಮಲಾಳಿಗೂ ಅದೇ ರೀತಿ ಮದುವೆ ಮಾಡಿ ತವರು ಮನೆಗೆ ಕಳಿಸುವ ಯೋಜನೆ ರೂಪಿಸಿದ್ದರು. ಆದರೆ, ಅದನ್ನು ನಿರ್ಮಲಾ ಧಿಕ್ಕರಿಸಿ, ಧೈರ್ಯದಿಂದ ಓದುವುದನ್ನು ಮುಂದುವರಿಸಿದರು.

    ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಆ 6 ನಿಮಿಷದ ಸನ್ನಿವೇಶಕ್ಕೆ 60 ಕೋಟಿ ರೂ. ಖರ್ಚು!

    ನಿನ್ನ ಶಿಕ್ಷಣಕ್ಕೆ ಇನ್ನು ಮುಂದೆ ಹಣ ನೀಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಪೋಷಕರು ಆಕೆಯ ಮನವೊಲಿಸಲು ಪ್ರಯತ್ನಿಸಿದರು. ಅಲ್ಲದೆ, ಹತ್ತಿರದಲ್ಲಿ ಯಾವುದೇ ಜೂನಿಯರ್ ಕಾಲೇಜು ಇಲ್ಲದ ಕಾರಣ, ನೀನು ತರಗತಿಗಳಿಗೆ ಹಾಜರಾಗಲು ದೂರ ಪ್ರಯಾಣಿಸಬೇಕು, ಇದು ಕಷ್ಟವಾಗುತ್ತದೆ ಎಂದು ನಿರ್ಮಲಾಗೆ ಹೇಳಿದರು. ಆದರೆ ಜೀವನದಲ್ಲಿ ತನ್ನ ಶೈಕ್ಷಣಿಕ ಗುರಿಗಳನ್ನು ತಲುಪಬೇಕು ಎಂದು ಅಚಲ ನಿರ್ಧಾರ ಕೈಗೊಂಡ ನಿರ್ಮಲಾ, ಕಳೆದ ವರ್ಷ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಶಾಸಕ ವೈ ಸಾಯಿಪ್ರಸಾದ್ ರೆಡ್ಡಿಯನ್ನು ಸಂಪರ್ಕಿಸಿ, ತನ್ನ ಸಮಸ್ಯೆಯನ್ನು ವಿವರಿಸಿದ್ದರು.

    ಬಾಲಕಿಯ ಅವಸ್ಥೆಯಿಂದ ಮನನೊಂದ ಅದೋನಿ ಶಾಸಕರು, ಜಿಲ್ಲಾಧಿಕಾರಿ ಜಿ. ಸೃಜನಗೆ ಈ ಬಗ್ಗೆ ಮಾಹಿತಿ ನೀಡಿದರು. ಇದಾದ ಬಳಿಕ ಅವರ ಮಧ್ಯಪ್ರವೇಶದಿಂದ ನಿರ್ಮಲಾರನ್ನು ಬಾಲ್ಯವಿವಾಹ ಸಂಕಷ್ಟದಿಂದ ರಕ್ಷಣೆ ಮಾಡಲಾಯಿತು. ತದನಂತರ ನಿರಂತರ ಅಭ್ಯಾಸ, ಕಠಿಣ ಶ್ರಮದಿಂದ ಈಗ ಮಧ್ಯಂತರ ಪರೀಕ್ಷೆಯಲ್ಲಿ ಟಾಪರ್​ ಆಗಿ ಹೊರಹೊಮ್ಮಿದ್ದು, ಮುಂದೆ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತೀನಿ, ಐಪಿಎಸ್ ಅಧಿಕಾರಿಯಾಗುವ ಆಸೆಯಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್)

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts