More

    ‘ಪುಷ್ಪ 2’ ಚಿತ್ರದ ಆ 6 ನಿಮಿಷದ ಸನ್ನಿವೇಶಕ್ಕೆ 60 ಕೋಟಿ ರೂ. ಖರ್ಚು!

    ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಸುಕುಮಾರ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ಚಿತ್ರ “ಪುಷ್ಪ 2: ದ ರೂಲ್​’. 2021ರಲ್ಲಿ ತೆರೆಗೆ ಬಂದ “ಪುಷ್ಪ 1: ದ ರೈಸ್​’ ಚಿತ್ರದ ಸೀಕ್ವಲ್​ ಇದು. ಏ. 8ರಂದು ಅಲ್ಲು ಅರ್ಜುನ್​ 42ನೇ ವರ್ಷದ ಹುಟ್ಟುಹಬ್ಬದಂದು ಟೀಸರ್​ ಮೂಲಕ ನಾಯಕ ಅಲ್ಲು ಅರ್ಜುನ್​ರ ವಿಭಿನ್ನ ಲುಕ್​ ರಿವೀಲ್​ ಮಾಡಲಾಗಿತ್ತು.

    'ಪುಷ್ಪ 2' ಚಿತ್ರದ ಆ 6 ನಿಮಿಷದ ಸನ್ನಿವೇಶಕ್ಕೆ 60 ಕೋಟಿ ರೂ. ಖರ್ಚು!

    ಗಂಗಮ್ಮ ಜಾತ್ರೆಯಲ್ಲಿ ನಿಂಬೆಹಣ್ಣಿನ ಹಾರ ಧರಿಸಿ, ಸೀರೆಯುಟ್ಟು, ಗಂಗಮ್ಮ ದೇವಿ ಲುಕ್​ನಲ್ಲಿ ಅರ್ಜುನ್​ ಮಿಂಚಿದ್ದರು. ಟೀಸರ್​ ಈಗಾಗಲೇ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರ ನಡುವೆ ಆ ಸನ್ನಿವೇಶಕ್ಕಾಗಿ ಕೋಟಿ ಕೋಟಿ ರೂ. ಖರ್ಚು ಮಾಡುತ್ತಿರುವ ಬಗ್ಗೆ ಚಿತ್ರತಂಡದ ಮೂಲಗಳಿಂದ ಮಾಹಿತಿ ಹೊರಬಂದಿದೆ.

    'ಪುಷ್ಪ 2' ಚಿತ್ರದ ಆ 6 ನಿಮಿಷದ ಸನ್ನಿವೇಶಕ್ಕೆ 60 ಕೋಟಿ ರೂ. ಖರ್ಚು!
    Oplus_131072

    ಹೌದು, ಗಂಗಮ್ಮ ಜಾತ್ರೆ ಮತ್ತು ಫೈಟ್​ ಒಳಗೊಂಡ 6 ನಿಮಿಷದ ಸನ್ನಿವೇಶಕ್ಕಾಗಿ ಬರೋಬ್ಬರಿ 60 ಕೋಟಿ ರೂ. ಖರ್ಚು ಮಾಡಲಾಗಿದೆಯಂತೆ. 30 ದಿನಗಳ ಕಾಲ ಆ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಅಂದಹಾಗೆ “ಪುಷ್ಪ 2: ದ ರೂಲ್​’ ಇದೇ ಆ. 15ರಂದು ವಿಶ್ವಾದ್ಯಂತ ರಿಲೀಸ್​ ಆಗಲಿದೆ. &ಏಜೆನ್ಸೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts