More

    ಒಲಿಂಪಿಕ್ಸ್​ ಕನಸು ಭಗ್ನಗೊಳಿಸಲು ಸಂಚು; ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ವಿನೇಶ್ ಪೋಗಟ್​​ ಆರೋಪ

    ನವದೆಹಲಿ: ಒಲಿಂಪಿಕ್ಸ್​ ಅರ್ಹತಾ ಕೂಟಕ್ಕೆ ತನ್ನೊಂದಿಗೆ ತೆರಳಬೇಕಿರುವ ತರಬೇತಿ ಸಿಬ್ಬಂದಿಗೆ ಲಾಜಿಸ್ಟಿಕ್ಸ್​ ಸಮಸ್ಯೆ ಸೃಷ್ಟಿಸುವ ಮೂಲಕ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್​ಐ) ತನ್ನ ಸ್ಪರ್ಧೆಯನ್ನು ತಡೆಯಲು ಸಂಚು ರೂಪಿಸಿದೆ ಎಂದು ಮಹಿಳಾ ಕುಸ್ತಿಪಟು ವಿನೇಶ್​ ಪೋಗಟ್​ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಡಬ್ಲ್ಯುಎಫ್​ಐ, ಪ್ರವೇಶಪತ್ರಗಳನ್ನು ಕಳುಹಿಸುವ ಗಡುವು ಮುಗಿದ ಬಳಿಕ ವಿನೇಶ್​ ಮನವಿ ಸಲ್ಲಿಸಿರುವುದೇ ಈ ಸಮಸ್ಯೆಗಳಿಗೆ ಕಾರಣ ಎಂದು ಸ್ಪಷ್ಟನೆ ನೀಡಿದೆ. ಈ ನಡುವೆ, ತನ್ನನ್ನು ಉದ್ದೀಪನ ಪ್ರಕರಣದಲ್ಲಿ ಸಿಲುಕಿಸುವ ಭೀತಿಯೂ ಇದೆ ಎಂದು 29 ವರ್ಷದ ವಿನೇಶ್​ ಹೇಳಿಕೊಂಡಿದ್ದಾರೆ.

    ಮುಂದಿನ ವಾರ ಕಿರ್ಗಿಸ್ತಾನ್​ನಲ್ಲಿ ನಡೆಯಲಿರುವ ಏಷ್ಯನ್​ ಅರ್ಹತಾ ಕೂಟದಲ್ಲಿ ವಿನೇಶ್​ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ಕೋಟಾ ಸ್ಥಾನ ಜಯಿಸಲು ಹೋರಾಡಲಿದ್ದಾರೆ. ಈ ಸಂಬಂಧ ವಿನೇಶ್​ ಪೋಗಟ್​ ತನ್ನ ಕೋಚ್​ ಮತ್ತು ಫಿಸಿಯೋಗೂ ಪ್ರವೇಶ ಪತ್ರ ನೀಡುವಂತೆ ಮಾರ್ಚ್​ 18ರಂದು ಮನವಿ ಸಲ್ಲಿಸಿದ್ದರು. ಆದರೆ ಈ ಸಂಬಂಧ ಪ್ರವೇಶ ಪತ್ರಗಳನ್ನು ಕಳುಹಿಸುವ ಗಡುವು ಮಾರ್ಚ್​ 11ರಂದೇ ಮುಕ್ತಾಯಗೊಂಡಿತ್ತು. ಹೀಗಾಗಿ ವಿನೇಶ್​ ಮನವಿ ಪುರಸ್ಕರಿಸಲಾಗಿಲ್ಲ ಎಂದು ಡಬ್ಲ್ಯುಎಫ್​ಐ ತಿಳಿಸಿದೆ.

    ಬ್ರಿಜ್​ಭೂಷಣ್​ ಮತ್ತು ಅವರ ಬಣದ ಡಮ್ಮಿ ಅಧ್ಯಕ್ಷ ಸಂಜಯ್​ ಸಿಂಗ್​ ನಾನು ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವುದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಭಾರತ ತಂಡದ ಎಲ್ಲ ಕೋಚ್​ಗಳು ಬ್ರಿಜ್​ಭೂಷಣ್​ ಆಪ್ತರು. ಹೀಗಾಗಿ ಅವರು ನೀರಿನಲ್ಲಿ ಏನಾದರು ಬೆರೆಸಿ ನಾನು ಉದ್ದೀಪನ ಪರೀಕ್ಷೆಯಲ್ಲಿ ಫೇಲಾಗುವಂತೆ ಮಾಡಿದರೂ ಅಚ್ಚರಿ ಇಲ್ಲ ಎಂದು ವಿನೇಶ್​ ಪೋಗಟ್​ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

    IPL 2024: ವೇಗದ ಎಸೆತಗಳಿಂದ ಬ್ಯಾಟರ್​ಗಳನ್ನು ಕಂಗೆಡಿಸಿದ ಮಯಾಂಕ್​ ಯಾದವ್​ಗೆ ಈಗ ಕಾಡುತ್ತಿದೆ ಗಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts