More

    IPL 2024: ವೇಗದ ಎಸೆತಗಳಿಂದ ಬ್ಯಾಟರ್​ಗಳನ್ನು ಕಂಗೆಡಿಸಿದ ಮಯಾಂಕ್​ ಯಾದವ್​ಗೆ ಈಗ ಕಾಡುತ್ತಿದೆ ಗಾಯ!

    ಲಖನೌ: ಉರಿದಾಳಿಯೊಂದಿಗೆ ಸತತ 2 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ ಲಖನೌ ಸೂಪರ್​ಜೈಂಟ್ಸ್​ ತಂಡದ ಯುವ ವೇಗಿ ಮಯಾಂಕ್​ ಯಾದವ್​ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು, ಮುಂದಿನ 2 ಪಂದ್ಯಗಳನ್ನು ತಪ್ಪಿಸಿಕೊಳ್ಳುವ ನಿರೀಕ್ಷೆ ಇದೆ. ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಏಪ್ರಿಲ್​ 14ರಂದು ಕೆಕೆಆರ್​ ವಿರುದ್ಧ ಲಖನೌ ಆಡಲಿರುವ ಪಂದ್ಯಕ್ಕೂ ಮಯಾಂಕ್​ ಬಹುತೇಕ ಅಲಭ್ಯರಾಗಿದ್ದಾರೆ. ಇನ್ನು ಏಪ್ರಿಲ್​ 19ರಂದು ನಡೆಯಲಿರುವ ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ 21 ವರ್ಷದ ಮಯಾಂಕ್​ ಪೂರ್ಣ ಫಿಟ್ನೆಸ್​ ಕಂಡುಕೊಳ್ಳುವ ಸಾಧ್ಯತೆ ಇದೆ.

    “ಮಯಾಂಕ್​ರನ್ನು ಎಲ್ಲ ಪಂದ್ಯದಲ್ಲಿ ಆಡಿಸುವುದು ನಮ್ಮ ಆಸೆ. ಆದರೆ ಫಿಟ್ನೆಸ್​ ಸಮಸ್ಯೆಯಿಂದ ಅವರು ಇನ್ನೂ 2 ಪಂದ್ಯ ತಪ್ಪಿಸಿಕೊಳ್ಳಬಹುದು. ಆದರೆ ಸಾಧ್ಯವಾದಷ್ಟು ಬೇಗನೆ ಮರಳಿ ಕಣಕ್ಕಿಳಿಯಲಿದ್ದಾರೆ’ ಎಂದು ಎಲ್​ಎಸ್​ಜಿ ಕೋಚ್​ ಜಸ್ಟಿನ್​ ಲ್ಯಾಂಗರ್​ ತಿಳಿಸಿದ್ದಾರೆ.

    ಗಂಟೆಗೆ 150 ಕಿಲೋಮೀಟರ್​ಗೂ ಅಧಿಕ ವೇಗದಲ್ಲಿ ಬೌಲಿಂಗ್​ ಮಾಡಿ ಗಮನಸೆಳೆದಿರುವ ಮಯಾಂಕ್​ರನ್ನು ಮುಂಬರುವ ಟಿ20 ವಿಶ್ವಕಪ್​ಗೆ ಭಾರತ ತಂಡಕ್ಕೂ ಸೇರಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂಬ ವರದಿಗಳು ಈಗಾಗಲೆ ಹರಡಿವೆ.

    ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದ್ದ ಇಶಾನ್​-ಸೂರ್ಯಕುಮಾರ್​; ಮುಂಬೈಗೆ 7 ವಿಕೆಟ್​ಗಳ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts