More

    ಪ್ರಧಾನಿ ಮೋದಿ ವಿರುದ್ಧ ತೃತೀಯಲಿಂಗಿ ಸ್ಪರ್ಧೆ; ಪೈಪೋಟಿ ನೀಡುತ್ತೀರುವ ಹೇಮಾಂಗಿ ಸಖಿ ಯಾರು?

    ನವದೆಹಲಿ: ವಾರಣಾಸಿಯಿಂದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೃತೀಯಲಿಂಗಿ ರಾಜಕಾರಣಿ ಮಹಾಮಂಡಲೇಶ್ವರ ಹೇಮಾಂಗಿ ಸಖಿ ಮಾ ಅಭ್ಯರ್ಥಿಯಾಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಾಣಸಿಯಲ್ಲಿ ವಿಶೇಷ ಸ್ಪರ್ಧಿಯೊಬ್ಬರು ಚುನಾವಣಾ ಕಣದಲ್ಲಿ ಎದುರಾಗಿದ್ದಾರೆ. ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮಂಗಳಮುಖಿ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ. 47 ವರ್ಷದ ಅವರನ್ನು ಬಲಪಂಥೀಯ ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್‌ಎಂ) ಉತ್ತರ ಪ್ರದೇಶ ವಿಭಾಗದಿಂದ ಕಣಕ್ಕಿಳಿಸಲಾಗಿದೆ.

    ಹಿಮಾಂಗಿ ಸಖಿ ಅವರು ಅಖಿಲ ಭಾರತ ಹಿಂದೂ ಮಹಾಸಭಾದ ಪರವಾಗಿ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಹಿಂದೂ ಮಹಾಸಭಾ ಉತ್ತರ ಪ್ರದೇಶ ಅಧ್ಯಕ್ಷ ರಿಷಿ ಕುಮಾರ್ ತ್ರಿವೇದಿ ಹಿಮಂಗಿ ಸಖಿ ಹೆಸರನ್ನು ಘೋಷಿಸಿದರು.

    ವಾರಣಾಸಿಯಿಂದ ಅಖಿಲ ಭಾರತ ಹಿಂದೂ ಮಹಾಸಭಾದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಹಿಮಾಂಗಿ ಸಖಿ, ಕಿನ್ನರ ಸಮುದಾಯದ ಪರವಾಗಿ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇಂದಿಗೂ ಟ್ರಾನ್ಸ್ಜೆಂಡರ್ ಸಮುದಾಯವು ಭಿಕ್ಷಾಟನೆ ಅಥವಾ ವೇಶ್ಯಾವಾಟಿಕೆಯಿಂದ ಜೀವನೋಪಾಯವನ್ನು ನಡೆಸುತ್ತದೆ. ತೃತೀಯಲಿಂಗಿಗಳಿಗೆ ಸರ್ಕಾರ ಯಾವುದೇ ದಾರಿ ತೋರಿಸುತ್ತಿಲ್ಲ. ಏಪ್ರಿಲ್ 12ರಂದು ಕಾಶಿಗೆ ತೆರಳಿ ಬಾಬಾ ವಿಶ್ವನಾಥನ ದರ್ಶನ ಪಡೆದ ಬಳಿಕ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ  ಹಿಮಾಂಗಿ ಸಖಿ  ತಿಳಿಸಿದರು.

    ಹಿಮಾಂಗಿ ಸಖಿ ಯಾರು: 

    ವಿಶ್ವದ ಮೊದಲ ಮಂಗಳಮುಖಿ ಭಾಗವತ ಕಥಾ ವಾಚಕಿ ಇವರು ವಿಶ್ವದ ಹಲವೆಡೆ ಭಾಗವತ ಕಥಾ, ರಾಮಕಥಾ, ದೇವಿ ಭಾಗವತ ಕಥಾ ವಾಚನದ ಮೂಲಕ ಗಮನ ಸೆಳೆದಿದ್ದಾರೆ. ಇವರು ಮುಂಬೈನಲ್ಲಿದ್ದಾಗ ಮನೆಯ ಪಕ್ಕದಲ್ಲಿದ್ದ ಇಸ್ಕಾನ್‌ ದೇವಾಲಯದಿಂದ ಪ್ರೇರೇಪಣೆಗೊಂಡು ಕೃಷ್ಣನ ಭಕ್ತೆಯಾಗಿ ಬದಲಾಗಿದ್ದಾರೆ. ಮಂಗಳಮುಖಿಯರ ಹಕ್ಕುಗಳ ಪರವಾಗಿ ಹೋರಾಟ ನಡೆಸುವುದು, ಅವರಿಗೆ ಲೋಕಸಭೆಯಲ್ಲಿ ಮೀಸಲಾತಿ ಕಲ್ಪಿಸುವುದು, ಅವರಿಗೂ ಸಮಾಜದಲ್ಲಿ ಸರಿಯಾದ ಸ್ಥಾನಮಾನ ಸಿಗಬೇಕು ಎಂಬುದು ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರ ಕನಸಾಗಿದೆ. ಈ ಕನಸು ಸಾಕಾರಗೊಳಿಸಲು ಅವರು ಚುನಾವಣೆ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಆಯೋಗದ ಮಾಹಿತಿ ಪ್ರಕಾರ, 2024ರಲ್ಲಿ 48,044 ಮಂಗಳಮುಖಿಯರು ಮತದಾನ ಮಾಡಲಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ 39,683 ಮಂಗಳಮುಖಿಯರು ನೋಂದಣಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

    ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

    ಮಂಗಳೂರಿನಲ್ಲಿ ಎಳನೀರು ಕುಡಿದು 15 ಮಂದಿ ಅಸ್ವಸ್ಥ

    ಈಕೆ ಮಾಡಿದ ಒಂದು ಕೆಲಸಕ್ಕೆ 7 ವರ್ಷ ನಂಬರ್ ಬ್ಲಾಕ್ ಮಾಡಿದ ಸ್ಟಾರ್ ಹೀರೋ.. ಯಾಕೆ ಗೊತ್ತಾ?

    ಒಳ ಉಡುಪು ತೆಗೆದು ಬೆಲಿಯಲ್ಲಿ ನೇತು ಹಾಕಿದ್ರೆ ಒಳ್ಳೆಯ ಗಂಡ ಸಿಗ್ತಾನೆ; ಬೆತ್ತಲೆಯಾಗಲೆಂದೇ ಇಲ್ಲಿಗೆ ಹುಡುಗಿಯರು ಬರ್ತಾರೆ…

    ಈ ಹೀರೋಗಾಗಿ ಏನು ಬೇಕಾದರೂ ಬಿಟ್ಟು ಹೋಗುತ್ತೇನೆಂದ್ರು ಪ್ರಿಯಾಮಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts