ನಂತರ, ಆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದಾಗ, ಅವರ ಫೋಟೋಗಳು ಈ ಫೋಟೋ ಶೇರಿಂಗ್ ಅಪ್ಲಿಕೇಶನ್ನಲ್ಲಿ ಮತ್ತು ಬೇರೆ ಬೇರೆ ಸಾಮಾಜಿಕ ಜಾಲತಾಣದಲ್ಲಿಯೂ ಧೂಳೆಬ್ಬಿಸಿವೆ. ಜಾನ್ವಿ ಕಪೂರ್ ಬಿಕಿನಿ ಧರಿಸುವುದು ಇದೇನು ಮೊದಲಲ್ಲ. ಈ ಹಿಂದೆಯೂ ನಟಿ ಬಹಳಷ್ಟು ಬಾರಿ ಬಿಕಿನಿ ಧರಿಸಿದ್ದಾರೆ. ಜೊತೆಗೆ, ನಟಿಯ ಆ ಫೋಟೋಗಳು ಸಖತ್ ವೈರಲ್ ಆಗುತ್ತವೆ. ಹೀಗಾಗಿ, ಜಾನ್ವಿ ಕಪೂರ್ ಬಿಕಿನಿ ಧರಿಸುವ ನಟಿಯರ ಪಟ್ಟಿಯಲ್ಲಿ ಒಬ್ಬರು ಎನ್ನಬಹುದು. ಸದ್ಯ, ನಟಿ ಹಂಚಿಕೊಂಡಿರುವ ಹಳದಿ ಮತ್ತು ಗುಲಾಬಿ ಬಣ್ಣದ ಬಿಕಿನಿ ಫೋಟೋಗಳು 1.7 ಮಿಲಿಯನ್ಗೂ ಹೆಚ್ಚು ಲೈಕ್ಸ್ ಪಡೆದಿವೆ. ಜತೆಗೆ, ಸಾವಿರ ಸಾವಿರ ಕಾಮೆಂಟ್ಗಳನ್ನು ಗಿಟ್ಟಿಸಿಕೊಂಡಿವೆ.