ಅಪ್ಪು ಜೊತೆಗಿನ ಕೊನೆಯ ನೆನಪು ಹಂಚಿಕೊಂಡ ನಟ ಜಗ್ಗೇಶ್! ವಿಡಿಯೋ ವೈರಲ್...

1234083
Published on
ಅಭಿಮಾನಿಗಳ ದೇವರು ಪುನೀತ್‌ ರಾಜ್‌ಕುಮಾರ್ ಅಗಲಿ ಮೂರು ತಿಂಗಳು ಉರುಳುತ್ತಿವೆ. ಆದರೆ, ನಟನನ್ನು ಅವರ ಆಪ್ತರು, ಕುಟುಂಬದವರು, ಅಭಿಮಾನಿಗಳು ಎಲ್ಲರೂ ಅವರನ್ನು ನೆನಪಿಸಿಕೊಳ್ಳುತ್ತಲೆ ಇದ್ದಾರೆ. ಇನ್ನು, ನಟ ಜಗ್ಗೇಶ್ ಕೂಡಾ ಆಗಾಗ ಅಪ್ಪು ಅವರನ್ನು ಕುರಿತು ಒಂದಲ್ಲಾ ಒಂದು ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೆ ಇದ್ದಾರೆ. ಇದೀಗ, ಜಗ್ಗೇಶ್‌ ಅವರು ಪುನೀತ್‌ ಅವರ ಒಂದು ಹಳೆಯ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು, ಇದು ಅಪ್ಪು ಮತ್ತು ಜಗ್ಗೇಶ್ ಅವರು ಮಂತ್ರಾಲಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ. ಕೊನೆಯದಾಗಿ ಇವರಿಬ್ಬರೂ ಮಂತ್ರಾಲಯಕ್ಕೆ ಭೇಟಿ ಮಾಡಿದ್ದ ಸಂದರ್ಭ ಇದಾಗಿದೆ. 
ಆ ಕೊನೆಯ ಗಳಿಗೆಯನ್ನು ನೆನೆದು ನಟ ಜಗ್ಗೇಶ್, "ಮಂತ್ರಾಲಯದಲ್ಲಿ April 5th 2021 ಸೋಮವಾರ, ಪುನೀತನ ಜೊತೆಗಿನ ಕೊನೆಯ ಕ್ಷಣ. ಈ ಅಪರೂಪದ ವಿಡಿಯೋ ಕಳಿಸಿದ ಮಂತ್ರಾಲಯ pro ನರಸಿಂಹಾಚಾರ್ಯ ರವರಿಗೆ ಧನ್ಯವಾದ. ಪುನೀತ ಅಲ್ಲೆ ರಾಯರ ಜೊತೆ ಉಳಿದುಬಿಟ್ಟ,'' ಎಂಬ ಕ್ಯಾಪ್ಷನ್ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳಿದ್ದು, 40,000ಕ್ಕೂ ಹೆಚ್ಚು ಲೈಕ್ಸ್ ಇವೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಪ್ಪು ಅಭಿಮಾನಿಗಳ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net